ರಶ್ಮಿಕಾ ಮಂದಣ್ಣ… ಸ್ಯಾಂಡಲ್ ವುಡ್ ನಿಂದ ಹಿಟ್ ಆಗಿ ಟಾಲಿವುಡ್ ಗೆ ಹೋಗಿ ಅಲ್ಲೇ ಸೆಟಲ್ ಆದ ನಟಿ… ಸದ್ಯ ಕಾಲಿವುಡ್ ನಲ್ಲೂ , ಬಾಲಿವುಡ್ ನಲ್ಲೂ ಆಫರ್ ಗಳನ್ನ ಪಡೆದು ಅಲ್ಲಿಯೂ ಮಿಂಚುತ್ತಿದ್ದಾರೆ.. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ರಶ್ಮಿಕಾ , ಜಾಹಿರಾತುಗಳಲ್ಲೂ ಕಾಣಿಸಿಕೊಳ್ತಿರುತ್ತಾರೆ..
ರಶ್ಮಿಕಾ ಏನೇ ಮಾಡಿದ್ರೂ ಟ್ರೋಲ್.. ಯಾವ ಬಟ್ಟೆ ಹಾಕಿದ್ರೂ ಟ್ರೋಲ್, ಯಾವುದೇ ಭಾಷೆ ಮಾತನಾಡಲಿ ಟ್ರೋಲ್ , ಕನ್ನಡ ಕಡೆಗಣನೆ ವಿಚಾರದಲ್ಲೂ ಟ್ರೋಲ್ … ಟ್ವೀಟ್ ಮಾಡಿದ್ರೂ ಟ್ರೋಲ್ , ಇನ್ನೊಬ್ಬರನ್ನ ಹೊಗಳಿದ್ರೂ ಟ್ರೋಲ್.. ಒಟ್ನಲ್ಲಿ ರಶ್ಮಿಕಾ ಏನೇ ಮಾಡಿದ್ರೂ ಹೊಗಳೋರ ಸಂಖ್ಯೆಯಷ್ಟೇ ತೆಗಳುವವರ ಸಂಖ್ಯೆಯೂ ಇದೆ ಅಂದ್ರೆ ತಪ್ಪಾಗಲಾರದು..
ಟ್ರೋಲ್ ಟಾಪಿಕ್ ನಲ್ಲಿ ರಶ್ಮಿಕಾ ಇದ್ದೇ ಇರುತ್ತಾರೆ.. ಈ ಹಿಂದೆ ರಶ್ಮಿಕಾ ಮಂದಣ್ಣ ಯಶ್ ಅವರನ್ನ ಬಿಲ್ಡ್ ಅಂತ ಕರೆದು ದೊಡ್ಡ ಮಟ್ಟದಲ್ಲಿ ಟ್ರೋಲ್ ಗೆ ಗುರಿಯಾಗಿದ್ರು.. ಇದೀಗ ಅವರ ನಟನೆಯ ಕೆಜೆಎಫ್ 2 ಟ್ರೇಲರನ್ನ ಬಹುವಾಗಿ ಹೊಗಳಿ ಟ್ರೋಲ್ ಆಗ್ತಿದ್ದಾರೆ..
ಅಷ್ಟೇ ಅಲ್ಲ ಜೇಮ್ಸ್ ಸಿನಿಮಾ ರಿಲೀಸ್ ಆದಾಗ ಈ ಬಗ್ಗೆ ಪ್ರತಿಕ್ರಿಯೆ ನೀಡದಕ್ಕೂ ಟ್ರೋಲ್ ಆಗಿದ್ದರು.. ಆಗ್ತಿದ್ದಾರೆ.. ಅಪ್ಪು ಜೊತೆಗೆ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು.. ಈ ನಿಟ್ಟಿನಲ್ಲಾದ್ರೂ ಒಂದು ಪ್ರತಿಕ್ರಿಯೆ ನೀಡಬಹುದಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ.. ಅಷ್ಟೇ ಅಲ್ಲ, ಅವತ್ತು ಕನ್ನಡ ಸಿನಿಮಾವನ್ನೇ ಕಡೆಗಣಿಸಿ ಬೇರೆ ಭಾಷೆಯಲ್ಲಿ ಮಿಂಚಲು ಹೋದ್ರಿ. ಇವತ್ತು ಅದೇ ಕನ್ನಡ ಸಿನಿಮಾವನ್ನೇ ಹೊಗಳುವ ಪರಿಸ್ಥಿತಿ ನಿಮಗೆ ಬಂದಿದೆ ಎಂದು ಕೆಲವರು ಲೇವಡಿ ಮಾಡಿದ್ದಾರೆ.