12 ಭಾಷೆಗಳಲ್ಲಿ ಬರಲಿರುವ ಸಿನಿಮಾಗೆ ಪ್ರಶಾಂತ್ ಸಂಬರ್ಗಿ ನಿರ್ಮಾಪಕ..!!
ಡ್ಯಾಂಡಲ್ ವುಡ್ ಡ್ರಗ್ ಲಿಂಕ್ ಕೇಸ್ ರಾಜ್ಯಾದ್ಯಂತ ಹಲ್ ಚಲ್ ಸೃಷ್ಟಿಸಿದ್ದ ವೇಳೆ ಸಂಜನಾ ಗಲ್ರಾನಿ ವಿರುದ್ಧ ಆರೋಪಿಸುತ್ತಾ ಹೆಚ್ಚು ಸುದ್ದಿಯಾಗಿ ನಂತರ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಒನ್ ಆಫ್ ದ ಫೈನಲಿಸ್ಟ್ ಆಗಿದ್ದ ಪ್ರಶಾಂತ್ ಸಂಬರಗಿ ಇದೀಗ ಸಿನಿಮಾರಂಗಕ್ಕೆ ಪ್ರವೇಶ ಮಾಡ್ತಿದ್ಧಾರೆ..
ನಟನಾಗಿ ಅಲ್ಲ… ನಿರ್ಮಾಪಕರಾಗಿ
ಹೌದು..! ಆಗಸ್ಟ್ 15ರ ಹಿನ್ನೆಲೆಯ ಕಥೆಯಾಧಾರಿತ ಸಿನಿಮಾ ಮಾಡುತ್ತಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿ ಜೊತೆಗೆ ಮಾತನಾಡಿರೋ ಅವರು ಈ ಸಿನಿಮಾದಲ್ಲಿ ದೇಶಬಿಟ್ಟು ಹೋದವರ ಕಥೆಯನ್ನು ಹೇಳಲು ಹೊರಟಿದ್ದೇವೆ. ಸ್ವಾತಂತ್ರ್ಯ ಸಿಕ್ಕ ಎರಡು ದಿನದ ಮುಂಚೆ ಭಾರತದಲ್ಲಿ ನಡೆದ ಮಹತ್ವದ ಘಟನೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆಗಸ್ಟ್ 13, 14 ಮತ್ತು 15… ಈ ಮೂರು ದಿನಗಳಲ್ಲಿ ನಡೆಯುವ ಕಥೆಯಾಧಾರಿತ ಸಿನಿಮಾ ಇದಾಗಿದೆ ಎಂದಿದ್ದಾರೆ..
ಅಷ್ಟೇ ಅಲ್ಲ ಈ ಸಿನಿಮಾ ಪ್ಯಾನ್ ಇಂಡಿಯಾವಾಗಿದೆ ಎನ್ನಲಾಗಿದೆ.. ಅಷ್ಟೇ ಅಲ್ದೇ ಈಗಾಗಲೇ ಬಹುತೇಕ ಸಿನಿಮಾದ ಶೂಟಿಂಗೇ ಕಂಪ್ಲೀಟ್ ಆಗಿದ್ಯಂತೆ.. ಬರೀ ಅಷ್ಟೇ ಅಲ್ವಂತೆ ಈ ಸಿನಿಮಾ 12 ಭಾಷೆಗಳಲ್ಲಿ ಬರಲಿದೆ. ಚೈನೀಸ್ ಭಾಷೆಗೂ ಇದನ್ನ ಡಬ್ ಮಾಡುವ ಆಲೋಚನೆಯಲ್ಲಿ ಇದ್ಯಂತೆ ಸಿನಿತಂಡ.. ‘ಕೇರಾಫ್ ಫುಟ್ ಪಾತ್’ ಚಿತ್ರ ಖ್ಯಾತಿಯ ಕಿಶನ್ ಮತ್ತು ಅವರ ತಂದೆ ಶ್ರೀಕಾಂತ್ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ..