RRR ಒಟ್ಟಾರೆ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ
ರಾಮ್ ಚರಣ್ ಮತ್ತು ಜೂನಿಯರ್ NTR ನಟಿಸಿ , ರಾಜಮೌಳಿ ನಿರ್ದೇಶಿಸಿರುವ RRR ಸಿನಿಮಾ ಕೇವಲ ಮೂರೇ ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ 500 ಕೋಟಿ ಸಂಪಾದನೆ ಮಾಡಿದೆ.. ಈ ಸಿನಿಮಾ ಇದೀಗ ಸಾರ್ವಕಾಲಿಕ 3 ನೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರಹೊಮ್ಮಿದೆ.. ಮೊದಲ ದಿನದ ಕಲೆಕ್ಷನ್ ನಲ್ಲಿ ಮೊದಲನೇ ಸ್ಥಾನಕ್ಕೆ ಬಂದಿರುವ RRR ಸರ್ವಕಾಲೀಕ ರೆಕಾರ್ಡ್ ನಲ್ಲೂ ಇನ್ನೂ ಕೆಲವೇ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಜಿಗಿಯಲಿದೆ..
ಮೊದಲ 5 ದಿನಗಳಲ್ಲಿ, ಚಿತ್ರವು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ.. ಇತ್ತೀಚಿನ ಅಪ್ಡೇಟ್ನ ಪ್ರಕಾರ, ಇದು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಕಂಡ 3 ನೇ ಭಾರತೀಯ ಚಲನಚಿತ್ರವಾಗಿದೆ.
5 ನೇ ದಿನದಂದು, ಈ ಸಿನಿಮಾ ಭಾರತದಲ್ಲೇ 400 ಕೋಟಿ ಕಲೆಕ್ಷನ್ ಮಾಡಿದೆ.. ಈ ಮೂಲಕ ಶಂಕರ್ ಅವರ ಸಾರಥ್ಯದ ರಜನಿಕಾಂತ್ ಅಭಿನಯದ 2.0 ಅನ್ನು ಚಿತ್ರದ ರೆಕಾರ್ಡ್ ಮುರಿದಿದೆ.. ಆ ಟಾಪ್ 3 ಸ್ಥಾನವನ್ನ ತನ್ನದಾಗಿಸಿಕೊಂಡಿದೆ.. ಅಂದ್ಹಾಗೆ ಮೊದಲ ಎರೆಡು ಸ್ಥಾನಗಳಲಿ ಇರೋದು ಸಹ ರಾಜಮೌಳಿ ಅವರದ್ದೇ ನಿರ್ದೇಶನದ ಸಿನಿಮಾಗಳು.. ಬಾಹುಬಲಿ , ಬಾಹುಬಲಿ 2..
RRR 5 ನೇ ದಿನದಲ್ಲಿ 41 ಕೋಟಿ ಗಳಿಸಿತು.. ಒಟ್ಟಾರೆ ಭಾರತದಲ್ಲಿ 412 ಕೋಟಿ ರೂ ಸಂಪಾದಿಸಿದೆ.. ಈ ಮೂಲಕ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 408 ಕೋಟಿ ಗಳಿಸಿದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರ ಪ್ಯಾನ್-ಇಂಡಿಯನ್ ಬಿಗ್ ಬಜೆಟ್ ಸಿನಿಮಾ 2.0 ಅನ್ನು ಮೀರಿಸಿದೆ.
ಸಾರ್ವಕಾಲಿಕ (ಭಾರತದಲ್ಲಿ) ಅಗ್ರ 5 ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳು..
ಬಾಹುಬಲಿ 2: ದಿ ಕನ್ ಕ್ಲೂಷನ್ – 1031 ಕೋಟಿ
ಬಾಹುಬಲಿ: ದಿ ಬಿಗಿನಿಂಗ್ – 418 ಕೋಟಿ
RRR – 412 ಕೋಟಿ
2.0 – 408 ಕೋಟಿ
ಆದ್ರೆ ಈ ರೆಕಾರ್ಡ್ ಅನ್ನ ಕೆಜಿಎಫ್ 2 ಸಿನಿಮಾ ಬ್ರೇಕ್ ಮಾಡುವ ನಿರೀಕ್ಷೆಯಿದೆ.