RRR : ರಾಮ್ ಚರಣ್ ಜೊತೆ ಆ ಒಂದು ಸೀನ್ ಶೂಟಿಂಗ್ ವೇಳೆ ಭಯವಾಗಿತ್ತು : ರಾಜಮೌಳಿ
ಬಾಹುಬಲಿ , ಬಾಹುಬಲಿ 2 , RRR ಸಿನಿಮಾದ ಹಾರ್ಟ್ ನಿರ್ದೇಶಕ ರಾಜಮೌಳಿ.. ನಟರು ಅದ್ಭುತ ನಟನೆ ಮಾಡಬಹುದು.. ಅದ್ಭುತ ಸ್ಕ್ರೀನ್ ಪ್ಲೇ ಮೂಲಕ ಸಿನಿಮಾದ ಅಧ್ಬುತವಾಗಿ ತೋರಿಸೋ ತಾಕತ್ತು ಕಲೆ ಡೈರೆಕ್ಟರ್ ದು.. ಸಿನಿಮಾದ ಯಶಸ್ಸಿನ ಮೊದಲ ಕ್ರೆಡಿಟ್ ಅವರಿಗೆ ಅಲ್ಲಬೇಕು..
ಅಂತಹ ಪವರ್ ಫುಲ್ ಡೈರೆಕ್ಟರ್ ಗಳಲ್ಲಿ ಒಬ್ಬರು ರಾಜಮೌಳಿ.. ಆದ್ರೆ ರಾಜಮೌಳಿ ಅವರು ರಾಮ್ ಚರಣ್ ಜೊತೆಗೆ ಒಂದು ಸೀನ್ ಶೂಟ್ ಮಾಡುವಾಗ ಭಯ ಪಟ್ಟಿದ್ರಂತೆ..
ಹೌದು..! ಸದ್ಯ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ RRR ಸಿನಿಮಾದ ಬಗ್ಗೆ ಇಂತಹದೊಂದು ಇಂಟ್ರೆಸ್ಟಿಂಗ್ ವಿಚಾರ ಗೊತ್ತಾಗಿದೆ.. ಇಂಟ್ರೊಡಕ್ಷನ್ ಸೀನ್ ನಲ್ಲಿ ರಾಮ್ ಚರಣ್ ಸಾವಿರಾರು ಜನರೊಂದಿಗೆ ಫೈಟ್ ಮಾಡುತ್ತಾರೆ. ಆದ್ರೆ ಈ ದೃಶ್ಯ ತೆಗೆಯುವುದು ಸುಲಭವಾಗಿರಲಿಲ್ಲ ಎಂದು ರಾಜಮೌಳಿ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಹೌದು ರಾಮಚರಣ್ ಲಕ್ಷಾಂತರ ಜನರ ನಡುವೆ ಧಮುಕಿ ಫೈಟ್ ಮಾಡುವ ಅವರ ಇಂಟ್ರಕ್ಷನ್ ಸೀನ್ ರೋಮಾಂಚನಕಾರಿ ಎನಿಸುತ್ತೆ.. ಈ ದೃಶ್ಯದ ಚಿತ್ರೀಕರಣ ಮಾಡಬೇಕಾದರೆ ರಾಜಮೌಳಿಗೆ ಬಹಳ ಭಯವಾಗಿತ್ತು. ದೃಶ್ಯ ತೆಗೆಯಲು ಮೂರು ತಿಂಗಳ ಕಾಲ ತಯಾರಿ ಮಾಡಿಕೊಳ್ಳಲಾಯಿತು. ಕೊನೆಗೆ ಆ ಒಂದು ದೃಶ್ಯಕ್ಕೆ ಸತತ ಹದಿನೈದು ದಿನ ಚಿತ್ರೀಕರಣ ಮಾಡಬೇಕಾಯಿತು ಎಂದಿದ್ದಾರೆ..
ರಾಮ್ ಚರಣ್ ಸುತ್ತ ಸುಮಾರು 300-400 ಮಂದಿ ತರಬೇತಿ ಪಡೆದ ಫೈಟರ್ಸ್ಗಳು, ಅವರ ಸುತ್ತ ತರಬೇತಿ ಪಡೆದ ಕ್ಯಾರೆಕ್ಟರ್ ನಟರು, ಅವರ ಹಿಂದೆ ತರಬೇತಿ ಪಡೆಯದ ನಟರನ್ನು ಇಟ್ಟು ಈ ದೃಶ್ಯದ ಚಿತ್ರೀಕರಣ ಮಾಡಲಾಗಿದೆ.
ದೃಶ್ಯದ ಚಿತ್ರೀಕರಣದ ವೇಳೆ ಆಕ್ಷನ್ ಹೇಳುತ್ತಿದ್ದಂತೆ ಸಾವಿರಾರು ಜನ ನುಗ್ಗುತ್ತಿದ್ದರಂತೆ. ಅವರ ಮಧ್ಯೆ ರಾಮ್ ಚರಣ್, ಕೂಗಾಟ ಕಿರುಚಾಟಗಳ ನಡುವೆ ದೊಡ್ಡದಾಗಿ ಧೂಳು ಸಹ ಏಳುತ್ತಿತ್ತು.. ಕೆಲವು ಭಾರಿ ಜನ ಮುಗಿಬಿದ್ದಾಗ ರಾಮ್ ಚರಣ್ ಕಾಣಿಸುತ್ತಲೇ ಇರುತ್ತಿರಲಿಲ್ಲ, ಆಗೆಲ್ಲ ಬಹಳ ಭಯವಾಗುತ್ತಿತ್ತು.. ರಾಮ್ ಚರಣ್ ಗೆ ಏನಾದರೂ ಆಗಿಬಿಡುತ್ತದೆ ಎಂದು ಬಹಳ ಭಯದಲ್ಲಿಯೇ ಆ ದೃಶ್ಯವನ್ನು ಚಿತ್ರೀಕರಣ ಮಾಡಿದ್ದು ಎಂದು ರಾಜಮೌಳಿ ಅವರು ಹೇಳಿಕೊಂಡಿದ್ದಾರೆ.