Salman Khan : ಸೋದರಳಿಯನ ಬರ್ತ್ ಡೇ ಪಾರ್ಟಿಯಲ್ಲಿ ಸಲ್ಲು ಭಾಯ್
ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ – ನಟ ಆಯುಷ್ ಶರ್ಮಾ ಅವರ ಪುತ್ರ ಅಹಿಲ್ ಖಾನ್ ಅವರ 6ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಲ್ಲು ಭಾಗಿಯಾಗಿದ್ದರು.. ಕಾರ್ಯಕ್ರಮದಲ್ಲಿ ಫೈರ್ ಡ್ಯಾನ್ಸ್, ಆಟಗಳು, ಬಲೂನ್ಗಳು, ಕಲರ್ ಫುಲ್ ಲೈಟ್ಗಳಿಂದ ಅಲಕೃಂತವಾಗಿ ಅಟ್ರ್ಯಾಕ್ಟೀವ್ ವಾತಾವರಣ ಸೃಷ್ಟಿಸಲಾಗಿತ್ತು.. ಮೇಳದ ಥೇಮ್ ನೊಂದಿಗೆ ಪಾರ್ಟಿ ಆಯೋಜನೆಗೊಂಡಿತ್ತು..
ಸೋಷಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.. ವಿಡಿಯೋದಲ್ಲಿ ಸಲ್ಮಾನ್ ಖಾನ್ ತಮ್ಮ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮತ್ತು ಸೋದರಳಿಯ ಅಹಿಲ್ ಜೊತೆಗೆ ಪಾರ್ಟಿಯಲ್ಲಿ ಆನಂದಿಸುತ್ತಾ ತಿರುಗಾಡುವುದನ್ನು ಕಾಣಬಹುದು.
ಅಹಿಲ್ ಖಾನ್ ಅವರ ಆರನೇ ಹುಟ್ಟುಹಬ್ಬವು ಮಕ್ಕಳಿಗಾಗಿ ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ಪ್ರದೇಶದಲ್ಲಿ ನಡೆಯಿತು. ಇದು ಸಾಹಸ ವಲಯವಾಗಿತ್ತು.. ವೃತ್ತಿಪರ ಕಲಾವಿದರಿಂದ ಬೆಂಕಿಯ ಸಾಹಸಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಿ ಮಕ್ಕಳನ್ನ ಮನರಂಜಿಸಲಾಗಿದೆ.. ವಿಡಿಯೋದಲ್ಲಿ ಸಲ್ಮಾನ್ ಅರ್ಪಿತಾ ಮತ್ತು ಅಹಿಲ್ ಅವರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಸಲ್ಮಾನ್ ವಿಡಿಯೋಗೆ “#ಅಹಿಲ್ಸ್ ಬರ್ತ್ ಡೇ” ಎಂದು ಶೀರ್ಷಿಕೆ ನೀಡಿದ್ದಾರೆ.