Shiva Karthikeyan : ಸಂಭಾವನೆಗಾಗಿ ಕೋರ್ಟ್ ಮೊರೆ ಹೋದ ಸ್ಟಾರ್ ನಟ
ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ ಅವರು ಸಂಭಾವನೆ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ..
ಮಿ. ಲೋಕಲ್ ಚಿತ್ರತಂಡದ ವಿರುದ್ಧ ಕಾನೂನಿನ ಹೋರಾಟಕ್ಕೆ ಮುಂದಾಗಿದ್ದಾರೆ.. ಶಿವಕಾರ್ತಿಕೇಯನ್ ಅಭಿನಯದ ‘ಮಿಸ್ಟರ್ ಲೋಕಲ್’ ರಿಲೀಸ್ ಆಗಿ 3 ವರ್ಷಗಳೇ ಕಳೆದ್ರು ಇನ್ನೂ ಪೂರ್ಣ ಸಂಭಾವನೆ ಸಿಕ್ಕಿಲ್ಲವೆಂದು ಕೋರ್ಟ್ ನಲ್ಲಿ ನಟ ಕೇಸ್ ದಾಖಲಿಸಿದ್ಧಾರೆ..
ಮಿಸ್ಟರ್ ಲೋಕಲ್ ಚಿತ್ರದಲ್ಲಿ ನಟ ಶಿವಕಾರ್ತಿಕೇಯನ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಆದರೆ ಚಿತ್ರ ರಿಲೀಸ್ ಆಗಿ ವರ್ಷಗಳೇ ಕಳೆದರು, ಅವರಿಗೆ ಕೊಡಬೇಕಾದ ಸಂಭಾವನೆ ಪ್ಯಾಕೇಜ್ ಪೂರ್ಣವಾಗಿ ಕೊಡದೆ ನಿರ್ಮಾಪಕರು ಬಾಕಿ ಉಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಸ್ಟುಡಿಯೋ ಗ್ರೀನ್ ಫಿಲಂಸ್ನ ನಿರ್ಮಾಪಕ ಜ್ಞಾನವೇಲ್ ರಾಜಾ ವಿರುದ್ಧ ಶಿವಕಾರ್ತಿಕೇಯನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದೂರಿನಲ್ಲಿ ಶಿವಕಾರ್ತಿಕೇಯನ್ ನಮೂದಿಸಿರುವ ಪ್ರಕಾರ ‘ಮಿ.ಲೋಕಲ್’ ಚಿತ್ರಕ್ಕಾಗಿ ಕಾರ್ತಿಕೇಯನ್ ಒಪ್ಪಿಕೊಂಡಿದ್ದ 15 ಕೋಟಿ ರೂ. ಆದರೆ ನಿರ್ಮಾಣ ಸಂಸ್ಥೆ 11 ಕೋಟಿ ರೂ.ಗಳನ್ನು ಮಾತ್ರ ಕೊಟ್ಟು ಮಿಕ್ಕ ಹಣವನ್ನು ಕೊಟ್ಟಿಲ್ಲವಂತೆ. ಹಾಗಾಗಿ ಆ ಹಣವನ್ನು ನೀಡುವಂತೆ ಹಲವು ಬಾರಿ ಕೇಳಿದ್ದರು. ನಿರ್ಮಾಣ ಸಂಸ್ಥೆ ಮಿಕ್ಕ ಸಂಭಾವನೆ ಕೊಟ್ಟಿಲ್ಲ. ಹಾಗಾಗಿ ಸ್ಟುಡಿಯೋ ಗ್ರೀನ್ ವಿರುದ್ಧ ಶಿವಕಾರ್ತಿಕೇಯನ್ ಕೋರ್ಟ್ ಮೊರೆ ಹೋಗಿದ್ದಾರೆ.