ಸದ್ಯಕ್ಕೆ ದೇಶಾದ್ಯಂತ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ್ದೇ ಚರ್ಚೆ.. ಸೋಷಿಯಲ್ ಮೀಡಿಯಾದಿಂದ ಹಿಡಿದು , ಸಿನಿಮಾರಂಗ ರಾಜಕೀಯವಾಗಿಯೂ ಈ ಸಿನಿಮಾದ ಬಗ್ಗೆ ಮಾತನಾಡಲಾಗ್ತಿದೆ.. ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾಗೆ ದೇಶಾದ್ಯಂತ ಥಿಯೇಟರ್ ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ.. ಈಗಾಗಲೇ ಬಾಕ್ಸ್ ಆಫೀಸ್ ಕಲೆಕ್ಷನ್ 200 ಕೋಟಿ ಗಡಿ ದಾಟಿದೆ.. ಅಷ್ಟೇ ಅಲ್ದೇ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಹಲವು ರಾಜಕೀಯ ಗಣ್ಯರು ಈ ಸಿನಿಮಾ ನೋಡಿ ಪ್ರಶಂಸೆ ವ್ಯಕ್ತ ಪಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಹ ಸಿನಿಮಾಗೆ ಬೆಂಬಲ ನೀಡಿದ್ದಾರೆ..
ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಗಳಿಕೆ ಮಾಡುತ್ತಿದೆ. ಹೌದು ಕಡಿಮೆ ಬಜೆಟ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದರು, ಗಳಿಕೆಯಲ್ಲಿ ಮಾತ್ರ ಅಚ್ಚರಿ ರೀತಿಯಲ್ಲಿ ಗಳಿಕೆ ಮಾಡಿದೆ. ಈ ಚಿತ್ರ ಅತೀ ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಬಜೆಟ್ ನ ಚಿತ್ರಗಳ ಬಾಕ್ಸ್ ಆಫೀಸ್ ವಿಚಾರದಲ್ಲಿ ದಾಖಲೆ ಬರೆದಿದೆ. ಕೇವಲ ಮೂರೇ ಮೂರು ವಾರಕ್ಕೆ ಇದರ ಗಳಿಕೆ 234.03 ಕೋಟಿ ಎಂದು ಅಂದಾಜಿಸಲಾಗಿದೆ.
ದಿ ಕಾಶ್ಮೀರ್ ಫೈಲ್ಸ್’ ರಿಲೀಸ್ ಆದಾಗಿಂದ ಸಿನಿಮಾ ನಟ ನಟಿಯರು, ತಂತ್ರಜ್ಞರು ಮತ್ತು ರಾಜಕಾರಣಿಗಳು ಕೂಡ ಈ ಸಿನಿಮಾಗೆ ಬೆಂಬಲವಾಗಿ ನಿಂತಿದ್ದು, ಕೋಟಿ ಕೋಟಿ ಗಳಿಕೆಗೆ ಸಹಾಯ ಮಾಡಿದೆ. ಅಲ್ಲದೇ ಚಿತ್ರಕ್ಕಾಗಿ ಭಾರತ ಸರ್ಕಾರವು ಹಲವು ರಿಯಾಯಿತಿಗಳನ್ನು ಕೊಟ್ಟಿದ್ದು, ಸಿನಿಮಾ ನೋಡುವಂತೆ ಜನರಲ್ಲಿ ಪ್ರೋತ್ಸಾಹದ ಮಾತುಗಳನ್ನಾಡಿದೆ. ಇದೆಲ್ಲದ ಪರಿಣಾಮವಾಗಿ ಮೂರು ವಾರಕ್ಕೆ ಈ ಸಿನಿಮಾ 234.03 ಕೋಟಿ ಗಳಿಸಿ ಸಿನಿಮಾ ತಯಾರಕರಿಗೆ ಹುಮ್ಮಸ್ಸು ಹೆಚ್ಚಿಸಿದೆ.
The Kashmir Files: 1989-90 ರ ದಶಕದಲ್ಲಿ ಕಾಶ್ಮೀರ ಪಂಡಿತರ ಮೇಲೆ ಆದ ದೌರ್ಜನ್ಯ, ಅತ್ಯಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ನೈಜ ಘಟನೆಯಾದಾರಿತ ಚಿತ್ರವಾಗಿದೆ. ಈ ಚಿತ್ರವು ಸಾಕಷ್ಟು ಸುದ್ದಿಯಲ್ಲಿದ್ದು, ಚಿತ್ರದ ಕುರಿತು ಪರ-ವಿರೋಧದ ಮಾತು ಕೇಳಿ ಬರುತ್ತಿದೆ.