Anushka – Prabhas : ಮತ್ತೆ ಒಂದಾಗಲಿರುವ ‘ಬಾಹುಬಲಿ’ ಜೋಡಿ
ಸೌತ್ ಸಿನಿಮಾಗಳ ಟಾಪ್ ಫೇವರೇಟ್ ಆನ್ ಸ್ಕ್ರೀನ್ ಕಪಲ್ ಯಾರು ಅಂದ್ರೆ ಥಟ್ ಅಂತ ಪ್ರಭಾಸ್ ಅನುಷ್ಕಾ ಜೋಡಿ ನೆನಪಾಗುತ್ತೆ.. ಆನ್ ಸ್ಕ್ರೀನ್ ನಲ್ಲಿ ಈ ಜೋಡಿಯ ಕೆಮಿಸ್ಟ್ರಿ ಅಭಿಮಾನಿಗಳನ್ನ ಫಿದಾ ಆಗಿಸುತ್ತದೆ..
ಬಾಹುಬಲಿ ಸಿನಿಮಾ ನಂತರ ಈ ಜೋಡಿ ಸ್ಕ್ರೀನ್ ಶೇರ್ ಮಾಡಿಕೊಂಡಿಲ್ಲ.. ಅಂದ್ಹಾಗೆ ಈ ಜೋಡಿ ರಿಯಲ್ ಲೈಫ್ ನಲ್ಲೂ ತುಂಬಾ ಕ್ಲೋಸ್ ಅನ್ನೋ ವದಂತಿಗಳು ಆಗಾಗ ಹರಿದಾಡ್ತಿರುತ್ತೆ..
ಸದ್ಯ ಪ್ರಭಾಸ್ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದು ,. ಅನುಷ್ಕಾ ಸಹ ಸಿನಿಮಾ ಕೆಲಸದಲ್ಲಿ ಬ್ಯುಸಿಯಿದ್ದಾರೆ..
ಆದ್ರೆ ಈಗ ಈ ಜೋಡಿಯನ್ನ ಒಟ್ಟಾಗಿ ನೋಡಬೇಕೆಂದುಕೊಳ್ತಿರುವ ಅಭಿಮಾನಿಗಳ ಆಸೆ ಈಗ ಈಡೇರಿರುವ ಸಮಯ.. ಅಂದ್ರೆ ಅನುಷ್ಕಾ ಪ್ರಭಾಸ್ ಇಬ್ರೂ ಮತ್ತೊಂದು ಸಿನಿಮಾದಲ್ಲಿ ಒಂದಾಗಲಿದ್ದಾರೆ..
ಹೌದು ಪ್ರಭಾಸ್ ಅವರ ಮುಂದಿನ ಸಿನಿಮಾ ‘ರಾಜ ಡೀಲಕ್ಸ್’ ನಲ್ಲಿ ಅನುಷ್ಕಾ ನಾಯಕಿಯಾಗಲಿದ್ದಾರೆ ಎನ್ನಲಾಗ್ತಿದೆ..