KGF 2 vs ಜೇಮ್ಸ್…. ಏಪ್ರಿಲ್ 14 ಕ್ಕೆ OTT ಗೆ ಅಪ್ಪು ಸಿನಿಮಾ..!!
ಮಾರ್ಚ್ 17 ರಂದು ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆದ ಅವರ ಅಭಿನಯದ ಕೊನೆಯ ಸಿಇನಿಮಾ ಜೇಮ್ಸ್ ಅನ್ನ ಅದ್ಧೂರಿಯಾಗಿ ಕರುನಾಡಿನ ಜನರು ಮಗುವಂತೆ ಸ್ವಾಗತಿಸಿದ್ರು.. ಯಾವೊಂದು ಸಿನಿಮಾಗೂ ಈವರೆಗೂ ಕರುನಾಡಿನಲ್ಲಿ ಸಿಗದಂತಹ ಓಪನಿಂಗ್ ಜೇಮ್ಸ್ ಗೆ ಸಿಕ್ಕಿತ್ತು..
ಫಸ್ಟ್ ಡೇ ಕಲೆಕ್ಷನ್ ವಿಚಾರದಲ್ಲಿ ಕರ್ಕಾಟಕದಲ್ಲಿ ಜೇಮ್ಸ್ ಸರ್ವಾಕಾಲೀನ ರೆಕಾರ್ಡ್ ಮಾಡಿದೆ.. ಸಿನಿಮಾ 100 ಕೋಟಿ ಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. ಇನ್ನೂವರೆಗೂ ಜೇಮ್ಸ್ ಥಿಯೇಟರ್ ಗಳಲ್ಲಿ ಒಳ್ಳೆ ಪ್ರದರ್ಶನ ಕಾಣ್ತಿದೆ..
ಅಂದ್ಹಾಗೆ ಜೇಮ್ಸ್ ಸಿನಿಮಾ ಯಶ್ ಅಭಿನಯದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ KGF 2 ರಿಲೀಸ್ ಆಗ್ತಿರುವ ದಿನವೇ OTT ಗೆ ಲಗ್ಗೆ ಇಡುತ್ತಿದೆ..
ಜೇಮ್ಸ್ ಸಿನಿಮಾ ಐದೂ ಭಾಷೆಗಳಲ್ಲೂ ಏಕಕಾಲಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಸೋನಿ ಲೈವ್ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗುತ್ತಿರುವುದು ವಿಶೇಷ.
ಈ ವಿಷಯವನ್ನು ಸೋನಿ ಲೈವ್ ಸಂಸ್ಥೆ ಟ್ವಿಟರ್ನಲ್ಲಿ ಅನೌನ್ಸ್ ಮಾಡಿದೆ. “ಕರ್ನಾಟಕದ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ ಪ್ಯಾಕ್ಡ್ ಆಕ್ಷನ್ ಎಂಟರ್ಟೈನರ್ ‘ಜೇಮ್ಸ್’ ಅತೀ ಶೀಘ್ರದಲ್ಲಿ SonyLIV ನಲ್ಲಿ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಪ್ರಿಲ್ 14ಕ್ಕೆ ಎಕ್ಸ್ಕ್ಲೂಸಿವ್ ಆಗಿ ಸೋನಿ ಲವ್ನಲ್ಲಿ ಎಂದು ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.
ಕರ್ನಾಟಕ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ ಪ್ಯಾಕ್ಡ್ ಆಕ್ಷನ್ ಎಂಟರ್ಟೈನರ್ 'ಜೇಮ್ಸ್' ಬರಲಿದೆ ಅತೀ ಶೀಘ್ರದಲ್ಲಿ SonyLIV ನಲ್ಲಿ.#James, Streaming in Kannada, Telugu, Tamil, Malayalam & Hindi on April 14 exclusively on SonyLIV. #JamesOnSonyLIV @PRKAudio @PuneethRajkumar @PriyaAnand pic.twitter.com/h9bi7KWZU1
— Sony LIV (@SonyLIV) March 30, 2022