Karan Kundra – Tejasvi Prakash : ಮುನಿಸು ಮರೆತ ಬಿಗ್ ಬಾಸ್ ಜೋಡಿ ಹಕ್ಕಿ
ಬಿಗ್ ಬಾಸ್ 15 ರಲ್ಲಿ ಹೆಚ್ಚು ಗಮನ ಸೆಲೆದ ಜೋಡಿ , ಕರಣ್ ಕುಂದ್ರಾ , ತೇಜಸ್ವಿ ಶೋ ಮುಗಿದ ಮೇಲೆ ಎಲ್ಲಿ ನೋಡಿದ್ರೂ ಒಟ್ಟಾಗಿ ಕಾಣಿಸಿಕೊಳ್ತಾ ಇರುತ್ತಾರೆ.. ತೇಜಸ್ವಿನಿ ಈ ಸೀಸನ್ ನ ವಿನ್ನರ್ ಆಗಿದ್ರು.. ಕರಣ್ ರನ್ನರ್ ಅಪ್ ಆಗಿದ್ರು.
ಇತ್ತೀಚೆಗೆ ಮಾಧ್ಯಮದವರು ತೇಜಸ್ವಿ ಸುತ್ತ ಸುತ್ತುವರೆದಿದ್ದರು.. ಕೆಲ ದಿನಗಳ ಹಿಂದಷ್ಟೇ ತೇಜಸ್ವಿ ಹಾಗೂ ಕರಣ್ ನಡುವೆ ಅಸಮಾದಾನವಿದೆ ಎಂಬ ವಿಚಾರ ವೈರಲ್ ಆಗಿತ್ತು.. ಇದಾದ ನಂತರ ಮತ್ತೆ ಈ ಜೋಡಿ ಈಗ ಒಂದಾಗಿ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದ್ರು.
ಮೀಡಿಯಾದವರ ಗುಂಪಿನಿಂದ ತೇಜಸ್ವಿ ಅವರನ್ನ ಕರೆದುಕೊಂಡು ಸೇಫಾಗಿ ಕಾರಿನೊಳಗೆ ಕರಣ್ ಕುಂದ್ರಾ ಕೂರಿಸಿದ್ದಾರೆ.. ಈ ಜೋಡಿ ಇತ್ತೀಚೆಗೆ ಮುಂಬೈನಲ್ಲಿರುವ ಕಾಸ್ಟಿಂಗ್ ನಿರ್ದೇಶಕ ಮತ್ತು ಚಲನಚಿತ್ರ ನಿರ್ಮಾಪಕ ಮುಖೇಶ್ ಛಾಬ್ರಾ ಅವರ ಕಚೇರಿಯಿಂದ ಹೊರಬರುವಾಗ ಮಾಧ್ಯಮದವರು ಸುತ್ತುವರೆದಿದ್ದಾರೆ..