KGF 2 – RRR ರೆಕಾರ್ಡ್ ಮಾಡೋದು ಇಂಪಾಸಿಬಲ್ ..???
KGF 2 … KGF 2 … KGF 2 … ಸದ್ಯಕ್ಕೆ ಕೆಜಿಎಫ್ 2 ನದ್ದೇ ಜಪತಪ ಎಂಬುವಂತಾಗಿದೆ.. ಆ ಪರಿ ಕ್ರೇಜ್ ಈ ಸಿನಿಮಾದ್ದು.. ಏಪ್ರಿಲ್ 14 ಕ್ಕೆ ಸಿನಿಮಾ ರಿಲೀಸ್ ಆಗುತ್ತೆ.. ಅಂದ್ರೆ ವುಳಿದಿರುವುದು ಇನ್ನೂ 14 ದಿನಗಳು ಮಾತ್ರ.. ಸಿನಿಮಾತಂಡ ಟ್ರೇಲರ್ ಅನ್ನ ಅದ್ಧೂರಿಯಾಗಿ ಲಾಂಚ್ ಮಾಡಿದೆ… ಟ್ರೇಲರ್ ಎಲ್ಲಾ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳ ರೆಕಾರ್ಡ್ ಅಳಿಸಿ ಹಾಕಿರೋದು ಒಂದೆಡೆಯಾದ್ರೆ,,, ಸಿನಿಮಾ ಮೇಲಿನ ಕಾತರತೆ ಮತ್ತಷ್ಟು ಹೆಚ್ಚಿಸಿದೆ..
ಸಿನಿಮಾದ ಟ್ರೇಲರ್ ಕನ್ನಡಕ್ಕಿಂತ ಹಿಂದಿಯಲ್ಲೇ ಹೆಚ್ಚು ವೀವ್ಸ್ ಗಳಿಸಿರುವುದು ಬಾಲಿವುಡ್ ಮುಂದೆ , ಸೌತ್ ಅದ್ರಲ್ಲೂ ಕನ್ನಡದ ಪವರ್ ಏನೆಂದು ತೋರಿಸಿದೆ.. ಎಲ್ಲಿ ನೋಡಿದ್ರೂ ಕೆಜಿಎಫ್ 2 ದೇ ಚರ್ಚೆ..
ಆದ್ರೆ ಸೋಷಿಯಲ್ ಮೀಡಿಯಾದ ಹಾಟ್ ಟಾಪಿಕ್ ಬರೀ ಕೆಜಿಎಫ್ 2 ಮಾತ್ರವಲ್ಲ , RRR + Beast ಕೂಡ ಟ್ರೆಂಡ್ ಆಗ್ತಿದೆ..
ಅಂದ್ಹಾಗೆ RRR ಸಿನಿಮಾ ಕೇವಲ 6 ದಿನಗಳಲ್ಲೇ 600 ಕೋಟಿ ರೂ. ಕಲೆಕ್ಷನ್ ದಾಟಿದೆ.. ಈ ವಿಚಾರ ಎಲ್ರಿಗೂ ಗೊತ್ತೇ ಇದೆ.. ಈ ಮೂಲಕ ಬಾಹುಬಲಿ , ಬಾಹುಬಲಿ 2 , ರೋಬೋ 2 ಎಲ್ಲಾ ಸಿನಿಮಾಗಳ ರೆಕಾರ್ಡ್ ಬ್ರೇಕ್ ಆಗಿದೆ..

ಆದ್ರೆ ಗ್ರಾಸ್ ಪ್ರಾಫಿಟ್ ವಿಚಾರದಲ್ಲಿ ಬಾಹುಬಲಿ 2 ರೆಕಾರ್ಡ್ ಮುರಿಯೋಕೆ ಇನ್ನೊಂದಷ್ಟು ಸಮಯ ಬೇಕಾದ್ರೂ ಈಗಿನ ಪರಿಸ್ಥಿತಿ ನೋಡಿದ್ರೆ ಕಷ್ಟವೇ ಅನ್ನಿಸ್ತಿದೆ.. ಯಾಕಂದ್ರೆ ಬ್ಯಾಕ್ ಟು ಬ್ಯಾಕ್ ಪ್ಗಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗಲಿವೆ..
ಆದ್ರೆ RRR ಗಿರುವ ಅದೃಷ್ಟ KGF 2 ಗೆ ಇಲ್ಲ..!! ರಾಜಮೌಳಿ , ರಾಮ್ ಚರಣ್ , ಜ್ಯೂ. NTR ಅವರ RRR ರೆಕಾರ್ಡ್ ಮುರಿಯೋದಕ್ಕೆ ಪ್ರಶಾಂತ್ ನೀಲ್ ಯಶ್ ಕಾಂಬಿನೇಷನ್ ನ KGF ಗೆ ಕಷ್ಟ..
ಕಾರಣ ಇಷ್ಟೇ… RRR ಸಿನಿಮಾದ ಜೊತೆಗೆ ಯಾವುದೇ ದೊಡ್ಡ ಸಿನಿಮಾಗಳು ಫೈಟ್ ನಲ್ಲಿ ಇಲ್ಲ ಒಂದು.. ಇನ್ನೊಂದು RRR ಇಡೀ ವಿಶ್ವಾದ್ಯಂತ ಸುಮಾರು 10, 000 ( ಹತ್ತು ಸಾವಿರ ) ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ..
ಆದ್ರೆ ಕೆಜಿಎಫ್ 2 ರಿಲೀಸ್ ಆಗ್ತಿರುವುದು ಸುಮಾರು 6000 ಸಾವಿರ ಸ್ಕ್ರೀನ್ ಗಳಲ್ಲಿ.. ಅಂದ್ಮೇಲೆ ಲಾಜಿಕಲಿ ಮತ್ತು ಥಿಯೇಟರ್ ಸ್ಕ್ರೀನ್ ಗಳ ಲೆಕ್ಕಾಚಾರ ನೋಡಿದ್ರೆ RRR KGF 2 ಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ರೂ ಆಶ್ಚರ್ಯವಿಲ್ಲ.. ಮತ್ತೊಂದು KGF 2 ಜೊತೆಗೆ ಬಾಕ್ಸ್ ಆಫೀಸ್ ರೇಸ್ ನಲ್ಲಿ ದಳಪತಿ ವಿಜಯ್ ಬೀಸ್ಟ್ ಕಾಂಪಿಟೇಷನ್ ಕೊಡುತ್ತೆ.. ಸಹಜವಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಡೆತ ಬಿಳುತ್ತೆ..
ಇಷ್ಟೆಲ್ಲಾ ಅಡಚಣೆಗಳು KGF 2 ಗೆ ಎದುರಾಗಲಿದೆ.. ಎದೆಲ್ಲದರ ನಡುವೆ KGF 2 RRR ರೆಕಾರ್ಡ್ ಬ್ರೇಕ್ ಮಾಡೋದು ಸ್ವಲ್ಪ ಕಷ್ಟವೇ..