RRR : 6 ದಿನಗಳಲ್ಲಿ 600 ಕೋಟಿ ದಾಟಿದ ಕಲೆಕ್ಷನ್
ಮಾರ್ಚ್ 25 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ರಾಜಮೌಳಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ RRR ಈಗಾಗಲೇ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಹುಬಲಿ 2 ರೆಕಾರ್ಡ್ ಬ್ರೇಕ್ ಮಾಡಿದೆ..
ಮೊದಲ ದಿನವೇ ಸಿನಿಮಾ ಗ್ಲೋಬಲ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 223 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.. ಇದೀಗ ಕೇವಲ ಮೂರೇ ಮೂರು ದಿನಕ್ಕೆ ಹತ್ತಿರ ಹತ್ತಿರ 500 ಕೋಟಿ ರೂಪಾಯಿ ಗಳಿಸಿದೆ..
ಮೂರೇ ದಿನದಲ್ಲಿ RRR ಸಿನಿಮಾ 500 ಕೋಟಿ ಕ್ಲಬ್ ಸೇರಿದೆ. ಬಾಲಿವುಡ್ ಮುಂದೆ ಅಬ್ಬರಿಸಿ ಬೊಬ್ಬಿರಿದಿದೆ. ಹೊಸ ಇತಿಹಾಸ ಸೃಷ್ಟಿ ಮಾಡಿ ಮತ್ತೊಮ್ಮೆ ಸೌತ್ ಪವರ್ ತೋರಿಸಿದೆ.. ಬಾಲಿವುಡ್ ನ ಯಾವ ಸಿನಿಮಾಗಳು ಈ ಮಟ್ಟಿಗೆ ಅಬ್ಬರಿಸಿಲ್ಲ..
ಅಂದ್ಹಾಗೆ ಈವರೆಗೂ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಶ್ವದಾದ್ಯಂತ ರೂ. 611 ಕೋಟಿ ದಾಟಿದೆ. ಭಾರತದಲ್ಲೇ 474 ಕೋಟಿ ರೂ ಕಲೆಕ್ಷನ್ ಆಗಿದೆ. ಕೇವಲ ಹಿಂದಿ ಅವತರಣಿಕೆಯಿಂದಲೇ ಬರೋಬ್ಬರಿ 107 ಕೋಟಿ ಹಣ ಸಂಗ್ರಹವಾಗಿರುವ ಮಾಹಿತಿ ಸಿಕ್ಕಿದೆ..
ಆರು ದಿನಕ್ಕೆ ಒಟ್ಟು 611 ಕೋಟಿ ರೂಪಾಯಿ ಗಳಿಸಿದ್ದು, ವಾರಾಂತ್ಯಕ್ಕೆ ಸಾವಿರ ಕೋಟಿ ರೂಪಾಯಿ ಮುಟ್ಟುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.