“ಪವರ್… ಈಗೋ.. ಪೇಷೆನ್ಸ್.. ಇದ್ದ ಕಡೆ ಕೋಪ.. ವಿದ್ಯೆ ಇದ್ದ ಕಡೆ ಅಹಂ..” ‘ತ್ರಿಕೋನ’ ಟ್ರೇಲರ್ ..!!
“ಪವರ್… ಈಗೋ.. ಪೇಷೆನ್ಸ್.. ಇದ್ದ ಕಡೆ ಕೋಪ.. ವಿದ್ಯೆ ಇದ್ದ ಕಡೆ ಅಹಂ..” ‘ತ್ರಿಕೋನ’ ಸಿನಿಮಾದ ಟ್ರೇಲರ್ ಸೂಪರ್..!!
ಪವರ್… ಈಗೋ.. ಪೇಷೆನ್ಸ್.. ಇದ್ದ ಕಡೆ ಕೋಪ..
ವಿದ್ಯೆ ಇದ್ದ ಕಡೆ ಅಹಂ..
ಅನುಭವ ಇದ್ದ ಕಡೆ ತಾಳ್ಮೆ ..
ಇದು ನಾವುಗಳೇ ಮಾಡಿಕೊಂಡಿರುವ ಮನುಕುಲದ ನಿಯಮ..
ಈ ರೀತಿಯಾಗಿ ಆರಂಭವಾಗುವ ‘ತ್ರಿಕೋನ’ ಸಿನಿಮಾದ ಟ್ರೇಲರ್ ಸಖತ್ ವಿಭಿನ್ನ ಹಾಗೂ ಪ್ರಾಕ್ಟಿಕಲ್ ಆಗಿ ಅನ್ಸುತ್ತೆ..
ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಒಂದಷ್ಟು ಫ್ಯಾಂಟಸಿ ಎಲಿಮೆಂಟ್ಸ್ ಕೂಡ ಸೇರಿಸಿರಬಹುದು ಎಂಬುದು ಟ್ರೇಲರ್ ನೋಡಿದ್ರೆ ಗೊತ್ತಾಗುತ್ತೆ..
ಟ್ರೇಲರ್ ತುಂಬಾ ಪ್ರಾಮಿಸಿಂಗ್ ಎನಿಸುತ್ತೆ..
ಚಂದ್ರಕಾಂತ ಅವರು ನಿರ್ದೇಶಿಸಿರುವ ಈ ಸಿನಿಮಾಗೆ ಸುರೇಂದ್ರ ನಾಥ್ ಬಿ. ಆರ್ ಅವರ ಸಂಗೀತವಿದೆ. ಸುರೇಶ್ ಹೆಬ್ಳಿಕರ್ , ಲಕ್ಷ್ಮಿ , ಅಚ್ಯುತ್ ಕುಮಾರ್ , ಸುಧಾ ರಾಣಿ , ಸಾಧುಕೋಕಿಲ , ಮಾರುತೇಶ್ , ರಾಜವೀರ್ ಸೇರಿದಂತೆ ಹಲವರ ತಾರಾಬಳಗವಿದೆ.
ಪೊಲೀಸ್ ಪ್ರಾಕಿ ಪ್ರೊಡಕ್ಷನ್ ಬ್ಯಾನರ್ ನ ಅಡಿ ಮೂಡಿಬಂದಿರುವ ಸಿನಿಮಾಗೆ ರಾಜಶೇಖರ್ ಬಿ ಆರ್ ಬಂಡವಾಳ ಹೂಡಿದ್ಧಾರೆ.. ಏಪ್ರಿಲ್ 1 ಕ್ಕೆ ಈ ಸಿನಿಮಾ ತೆರೆಕಾಣಲಿದೆ..