ತಂದೆ ತಾಯಿಯಾಗ್ತಿದ್ದಾರೆ ನಿವೇದಿತಾ – ಚಂದನ್ ಶೆಟ್ಟಿ..!!
ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕವೇ ಪರಿಚಿತರಾಗಿ ಸ್ನೇಹ ಬೆಳೆದು ನಂತರ ಪ್ರೀತಿಗೆ ತಿರುಗಿ , ಆ ನಂತರ ಮದುವೆಯಾದ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಒಟ್ಟಾಗಿ ವಿಡಿಯೋ ಫೋಟೋಗಳನ್ನ ಹಂಚಿಕೊಳ್ತಾ ಇರುತ್ತಾರೆ..
ಇದೀಗ ಈ ಜೋಡಿ ತಂದೆ ತಾಯಿಯಾಗುತ್ತಿರುವ ವಿಚಾರವನ್ನ ಬಹಿರಂಗಪಡಿಸಿದ್ದಾರೆ.. 2020ರ ಫೆಬ್ರವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿ ಈಗ ತಮ್ಮ ಕುಟುಂಬದಕ್ಕೆ ಶೀಘ್ರವೇ ಹೊಸ ಸದಸ್ಯರು ಎಂಟ್ರಿ ಕೊಡಲಿದ್ದಾರೆ.. 2020ರಲ್ಲಿ ಈ ಜೋಡಿ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು..
ಸದ್ಯ ಚಂದನ್ ಶೆಟ್ಟಿ ಅವರು ರಾಪ್ ಸಾಂಗ್ಸ್ , ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಿದ್ದರೆ , ನಿವೇದಿತಾ ಗೌಡ ಪ್ರಸ್ತುತ ಹೊಸ ಶೋ ಗಿಚ್ಚಿ ಗಿಲಿಗಿಲಿಯಲ್ಲಿ ಕಾಣಿಸಿಕೊಳ್ತಿದ್ದಾರೆ..