KGF 2 : ಪವರ್ ಫುಲ್ ಸ್ಟಿಲ್ಸ್ , ಅಪ್ ಡೇಟ್ಸ್..!!
ಮಾರ್ಚ್ 27 ರ ಸಂಜೆ ಸುನಾಮಿಯಂತೆ ಸೋಷಿಯಲ್ ಮೀಡಿಯಾಗೆ ಅಪ್ಪಳಿಸಿದ KGF 2 ಟ್ರೇಲರ್ ಈಗಲೂ ಟ್ರೆಂಡಿಂಗ್ ನಂ.1 ನಲ್ಲಿದೆ.. ಟ್ರೇಲರ್ ನೋಡಿ ನೆಟ್ಟಿಗರ ಹಾರ್ಟ್ ಬೀಟ್ ಹೆಚ್ಚಾಗಿದೆ.. ಅಂದ್ಹಾಗೆ ಟೀಸರ್ ಯಾವ ರೀತಿ ಎಲ್ಲಾ ರೆಕಾರ್ಡ್ ಗಳ ಚಿಂದಿ ಚಿತ್ರಾನ್ನ ಮಾಡಿ ಹಾಕಿತ್ತೋ ಅದೇ ರೀತಿಯೇ KGF 2ಟ್ರೇಲರ್ ಬಾಹುಬಲಿ 2 , ಸಾಹೋ , RRR , ಪುಷ್ಪ ದಂತಹ ಸೂಪರ್ ಹಿಟ್ ಸಿನಿಮಾಗಳ ರೆಕಾರ್ಡ್ ಮಾಡಿದೆ..
ಕನ್ನಡಕ್ಕಿಂತ ತೆಲುಗು , ಹಿಂದಿಯಲ್ಲೇ ಹೆಚ್ಚು ವೀವ್ಸ್ ಗಳಿಸಿರೋದು ಒಂದೆಡೆ.. ಸಿನಿಮಾದ ಎಲ್ಲಾ ಭಾಷೆಗಳ ಟ್ರೇಲರ್ ನ ವೀವ್ಸ್ ಒಟ್ಟುಗೂಡಿ ಹೇಳಿದ್ರೆ , ಬೇರೆಲ್ಲಾ ಸಿನಿಮಾಗಳ ರೆಕಾರ್ಡ್ ಮುಂದೆ ಧೂಳೆಬ್ಬಿಸಿದೆ…
ಸದ್ಯ ಕೆಜಿಎಫ್ 2 ಟೀಮ್ ಪ್ರಚಾರ ಕೆಲಸ ಶುರು ಮಾಡಿಕೊಂಡಿದೆ.. ಇದಕ್ಕಾಗಿ ಖಾಸಗಿ ವಿಮಾನ ಏರಿರುವ ಟೀಮ್ ದೆಹಲಿ ಕಡೆ ಪ್ರಯಾಣ ಬೆಳಿಸಿದೆ.. ಖಾಸಗಿ ವಿಮಾನದಲ್ಲಿ ಪ್ರಯಾಣ ಬೆಳೆಸಿರುವ ಟೀಮ್ ನ ಫೋಟೋಗಳು ಎಲ್ಲೆಡೆ ವೈರಲ್ ಆಗಗ್ತಿದ್ದು ಅಭಿಮಾನಿಗಳು ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ..
ಪ್ರಮುಖ ರಾಜ್ಯಗಳ ಪ್ರಮುಖ ನಗರಗಳಿಗೆ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಾಯಕಿ ಮತ್ತು ಚಿತ್ರತಂಡದ ಪ್ರಯಾಣ ಬೆಳೆಸಿದ್ದಾರೆ. ಸುಮಾರು ಒಂದು ವಾರದ ಕಾಲ ಬೇರೆ ಬೇರೆ ರಾಜ್ಯಗಳಲ್ಲಿ ಸಿನಿಮಾ ಪ್ರಚಾರ ಮಾಡಲಿದೆ..