RRR ಸಿನಿಮಾ ಅಧ್ಬುತ ಪ್ರದರ್ಶನ ಕಾಣ್ತಿದೆ.. ಸಿನಿಮಾ 6 ದಿನಕ್ಕೆ 600 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. ಕೇವಲ ಭಾರದಲ್ಲೇ 480 ಕೋಟಿ ರೂ ಕಲೆಕ್ಷನ್ ಆಗಿದ್ದು.. ರಾಮ್ ಚರಣ್ , NTR ಪಾತ್ರವನ್ನ ಜನ ಕೊಂಡಾಡುತ್ತಿದ್ದಾರೆ..
ಆದ್ರೆ ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಆಲಿಯಾ ಪಾತ್ರದ ಮೇಲೆ ಬಹುನಿರೀಕ್ಷೆ ಇತ್ತು.. ಸಾಲದಕ್ಕೆ ಇದು ಅವರ ಮೊದಲ ಸೌತ್ ಸಿನಿಮಾ ಬೇರೆ.. ಆದ್ರೆ ಆಲಿಯಾ ಹೆಸರಿಗಿಂತ ಚಿಕ್ಕದಾಗಿತ್ತು ಅವರ ಪಾತ್ರ.. ತೀರ ಕಡಿಮೆ ನಿಮಿಷಗಳು ಆಲಿಯಾ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದಾರೆ..
ಹೀಗಾಗಿ ಆಲಿಯಾ ರಾಜಮೌಳಿ ವಿರುದ್ಧ ಗರಂ ಆಗಿದ್ದಾರೆ.. ಸೋಷಿಯಲ್ ಮೀಡಿಯಾದಿಂದ ರಾಜಮೌಳಿ ಅವರನ್ನ ಅನ್ ಫಾಲೋ ಮಾಡಿದ್ದಾರೆ ಅಂತೆಲ್ಲಾ ವದಂತಿಗಳು ಹರಿದಾಡ್ತಿವೆ..
ಆದ್ರೆ ಇದಕ್ಕೆಲ್ಲ ಈಗ ಖುದ್ದು ಆಲಿಯಾ ಭಟ್ ಫುಲ್ ಸ್ಟಾಪ್ ಇಟ್ಟಿದ್ದಾರೆ..
ಆಲಿಯಾರ ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ರು ಸಿನಿಮಾದ ಅವಧಿ ಉದ್ದವಾದ ಕಾರಣಕ್ಕೆ ಹಲವು ಸೀನ್ ಗಳಿಗೆ ಕತ್ತರಿ ಬಿದ್ದಿದೆ. ಇದೇ ವಿಚಾರವಾಗಿ ಆಲಿಯಾ ರಾಜಮೌಳಿ ಮೇಲೆ ಮುನಿಸಿಕೊಂಡಿದ್ದಾರೆ ಎಂಬೆಲ್ಲಾ ಗಾಸಿಪ್ ಗಳು ಹರುದಾಡಿದ್ದವು..
ಈ ಬಗ್ಗೆ ಆಲಿಯಾ ಪ್ರತಿಕ್ರಿಯೆ ಕೊಟ್ಟಿದ್ದು, ನಾನು RRR ಸಿನಿಮಾತಂಡದ ಮೇಲೆ ಬೇಸರಗೊಂಡಿದ್ದು, ಸಿನಿಮಾ ಪೋಸ್ಟ್ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಎಲ್ಲೆಡೆ ಸುದ್ದಿ ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನಾವು ಏನು ಪೋಸ್ಟ್ ಮಾಡುತ್ತೇವೆ ಅದನ್ನೆ ನಂಬಿ ಈ ರೀತಿ ಊಹಿಸುವುದು ತಪ್ಪು. ನಾನು ನನ್ನ ಇನ್ಸ್ಟಾ ಪ್ರೋಫೈಲ್ ರಿಫ್ರೆಶ್ ಮಾಡುತ್ತಿರುತ್ತೇನೆ. ಕೆಲವು ಫೋಟೋಗಳನ್ನು ತೆಗೆದುಹಾಕುತ್ತೇನೆ.
ಅದೇ ರೀತಿ RRR ಸಿನಿಮಾ ಪೋಸ್ಟ್ ಸಹ ಡಿಲೀಟ್ ಮಾಡಿದ್ದೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
RRR ಜಗತ್ತಿನಲ್ಲಿ ನಾನು ಭಾಗಿಯಾಗಿದ್ದಕ್ಕೆ ಕೃತಜ್ಞಳನಾಗಿದ್ದೇನೆ. ಸೀತಾ ಪಾತ್ರ ನನಗೆ ತುಂಬಾ ಇಷ್ಟವಾಯಿತು. ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಿದ್ದು ನನಗೆ ಸಂತೋಷವಿದೆ. ಎನ್ಟಿಆರ್ ಮತ್ತು ರಾಮ್ಚರಣ್ ಅವರ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ.
ಈ ಅದ್ಭುತವಾದ ಚಿತ್ರಕ್ಕೆ ಜೀವತುಂಬಲು ರಾಜಮೌಳಿ ಮತ್ತು ತಂಡ ತುಂಬಾ ಕಷ್ಟಪಟ್ಟಿದೆ. ಹಲವು ವರ್ಷಗಳನ್ನು ಈ ಸಿನಿಮಾಗಾಗಿ ಕೊಟ್ಟಿದ್ದಾರೆ. ಕಷ್ಟಪಟ್ಟು ಮಾಡಿರುವ ಸಿನಿಮಾ ಬಗ್ಗೆ ಕೆಟ್ಟ ವದಂತಿ ಹಬ್ಬಿಸಬೇಡಿ. ಇದನ್ನು ನಾನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.