Sonu Nigam : ಸೋನು ನಿಗಮ್ ಗೆ ಪದ್ಮಶ್ರೀ ಸಿಕ್ಕ ಖುಷಿಯಲ್ಲಿ ಪಾರ್ಟಿ
ಖ್ಯಾತ ಗಾಯಕರಾದ ಸೋನು ನಿಗಮ್ ಅವರಿಗೆ ಕಳೆದ ತಿಂಗಳು ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.. ಈ ಖುಷಿಯನ್ನ ಸಂಭ್ರಮಿಸಲು , ಸೋನು ನಿಗಮ್ ಅವರು ಅದ್ಧೂರಿ ಪಾರ್ಟಿ ಆಯೋಜನೆ ಮಾಡಿದ್ದರು.. ಈ ಪಾರ್ಟಿಗೆ ಬಾಲಿವುಡ್ ಸ್ಟಾರ್ ಗಳು ಆಗಮಿಸಿ ಸೋನುಗು ಅಭಿನಂದನೆ ಸಲ್ಲಿಸಿದ್ದಾರೆ..
ಅಮೀರ್ ಖಾನ್, ಅನಿಲ್ ಕಪೂರ್, ಜಾಕಿ ಶ್ರಾಫ್, ರೋಹಿತ್ ರಾಯ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅವರ ಈ ಪಾರ್ಟಿಯಲ್ಲಿ ಭಾಗವಹಿಸಿ ಸೂನು ಅವರಿಗೆ ಅಭಿನಂದಿಸಿದ್ದಾರೆ..
ಕಳೆದ ತಿಂಗಳು ದೆಹಲಿಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೋನು ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನಿಸಿದರು. ಪ್ರಸಿದ್ಧ ಗಾಯಕ ಮತ್ತು ಸಂಗೀತ ನಿರ್ದೇಶಕರಾದ ಸೋನು ನಿಗಮ್ ಅವರು 28 ಕ್ಕೂ ಹೆಚ್ಚು ಭಾಷೆಗಳಲ್ಲಿ 6,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.