Beast : ಏಪ್ರಿಲ್ 2ಕ್ಕೆ ಟ್ರೇಲರ್ ರಿಲೀಸ್..!!
ದಳಪತಿ ವಿಜಯ್ ಅವರ ಬೀಸ್ಟ್ ಟ್ರೇಲರ್ಗೆ ಬೇಡಿಕೆ ಹೆಚ್ಚಾಗಿದೆ.. ಏಪ್ರಿಲ್ 13 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.. ಅಭಿಮಾನಿಗಳು ಟ್ವಿಟರ್ನಲ್ಲಿ ವಿವಿಧ ಹ್ಯಾಶ್ಟ್ಯಾಗ್ ಗಳನ್ನು ಟ್ರೆಂಡಿಂಗ್ ಮಾಡಲಾರಂಭಿಸಿದ್ದಾರೆ. ಏಪ್ರಿಲ್ 2 ರಂದು ಸಂಜೆ 6 ಗಂಟೆಗೆ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಸಿನಿಮಾ ತಂಡ ಅನೌನ್ಸ್ ಮಾಡಿದ್ದು ಅಭಿಮಾನಿಗಳ ಎಕ್ಸೈಟ್ ಮೆಂಟ್ ಲೆವೆಲ್ ಗಗನಕ್ಕೇರಿದೆ.
ಈ ನಡುವೆ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್, “ನಾಳೆ ಸ್ಫೋಟಕ್ಕೆ ಸಿದ್ಧರಾಗಿ #BeastTrailer” ಎಂದು ಟ್ವೀಟ್ ಮಾಡಿದ್ದಾರೆ..
ಅನಿರುದ್ಧ್ ಅವರು ಇತ್ತೀಚೆಗೆ ಚಿತ್ರದ ಮೂರನೇ ಹಾಡನ್ನು ರೆಕಾರ್ಡ್ ಮಾಡಿದ್ದಾರೆ, ಅದು ಸಸ್ಪೆನ್ಸ್ ಆಗಿದ್ದು ಸರ್ಪ್ರೈಸ್ ಆಗಿರಲಿದೆ.. ಚಿತ್ರದಲ್ಲಿ ವಿಜಯ್ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ.
ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ‘Beast’ ಚಿತ್ರದಲ್ಲಿ ಸೆಲ್ವರಾಘವನ್, ಶೈನ್ ಟಾಮ್ ಚಾಕೊ, ಅಪರ್ಣಾ ದಾಸ್, ಯೋಗಿ ಬಾಬು ಮತ್ತು ವಿಟಿವಿ ಗಣೇಶ್ ಸೇರಿದಂತೆ ಇತರರು ನಟಿಸಿದ್ದಾರೆ. ಏಪ್ರಿಲ್ 13 ರಂದು 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ..