ಯುಗಾದಿಗೆ ರವಿತೇಜ ‘ಟೈಗರ್ ನಾಗೇಶ್ವರ್ ರಾವ್’ ಮುಹೂರ್ತ!
ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಾಸ್ ಮಹಾರಾಜ ರವಿತೇಜ…ಯುಗಾದಿಗೆ ‘ಟೈಗರ್ ನಾಗೇಶ್ವರ್ ರಾವ್’ ಸಿನಿಮಾದ ಮುಹೂರ್ತ! ವಂಶಿ ಡೈರೆಕ್ಷನ್-ಅಭಿಷೇಕ್ ಅರ್ಗವಾಲ್ ನಿರ್ಮಾಣ
ಈಗ ಏನಿದ್ರೂ ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ-ಹವಾಮಾನ..ಟಾಲಿವುಡ್ ನಲ್ಲೀಗ ಮತ್ತೊಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ತೆಲುಗಿನ ಮಾಸ್ ಮಹಾರಾಜ ರವಿತೇಜ ಟೈಗರ್ ನಾಗೇಶ್ವರ್ ರಾವ್ ಆಗಿ ಬಣ್ಣ ಹಚ್ಚಲಿದ್ದು, ಇದು ರವಿತೇಜ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ವಂಶಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ನಡಿ ಅಭಿಷೇಕ್ ಅಗರ್ವಾಲ್ ಬಂಡವಾಳ ಹೂಡ್ತಿದ್ದು, ತೇಜ್ ನಾರಾಯಣ್ ಅಗರ್ವಾಲ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದಾರೆ.
ರವಿತೇಜ ಸಿನಿಕರಿಯರ್ ಬಿಗ್ ಬಜೆಟ್ ಚಿತ್ರ!
ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಮೂಲಕ ಬಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಕನಸಿನ ಸಿನಿಮಾವಾಗಿರುವ ಟೈಗರ್ ನಾಗೇಶ್ವರ್ ರಾವ್ ಸಿನಿಮಾದ ಮುಹೂರ್ತ ಯುಗಾದಿ ಹಬ್ಬದಂದು ಅದ್ಧೂರಿಯಾಗಿ ನಡೆಯಲಿದೆ. ಯುಗಾದಿ ಶುಭದಿನದಂದು ಮಧ್ಯಾಹ್ನ 12.6ಕ್ಕೆ ಸಿನಿಮಾದ ಫ್ರೀ ಲುಕ್ ರಿಲೀಸ್ ಆಗಲಿದೆ, ಅಂದಹಾಗೇ ಇದು ರವಿತೇಜ ಸಿನಿಕರಿಯರ್ ನ ಬಿಗ್ ಬಜೆಟ್ ಸಿನಿಮಾವಾಗಿರಲಿದೆ.
ಟೈಗರ್ ನಾಗೇಶ್ವರ್ ರಾವ್, 1970ರಲ್ಲಿ ಸ್ಟುವರ್ಟ್ಪುರಂ ಎಂಬಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನ ಕಥಾನಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರವಿತೇಜ ಸಂಪೂರ್ಣವಾಗಿ ತಮ್ಮ ಮೇಕ್ ಓವರ್ ನ್ನು ಬದಲಿಸಿಕೊಂಡಿದ್ದಾರೆ. ಒಂದು ವಿಭಿನ್ನ ಪಾತ್ರದಲ್ಲಿ ರವಿತೇಜ ಮಿಂಚಲಿದ್ದಾರೆ. ಬಾಲಿವುಡ್ ಬ್ಯೂಟಿ ಕೃತಿ ಸನೂನ್ ಸಹೋದರಿ ನೂಪೂರ್ ಸನೂನ್ ರವಿತೇಜ್ ಗೆ ಜೋಡಿಯಾಗಿ ಮಿಂಚಲಿದ್ದಾರೆ.
ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದ್ದು, 70ರ ದಶಕದ ಟಚ್ ಜೊತೆಗೆ ಮೈ ಜುಮ್ ಎನಿಸುವ ಆಕ್ಷನ್ ಸೀನ್ಸ್ ಸಿನಿಮಾದಲ್ಲಿರಲಿದೆ. ಆರ್.ಮ್ಯಾಥಿ ಐಎಸ್ ಸಿ ಕ್ಯಾಮೆರಾ ವರ್ಕ್, ಜೆವಿ ಪ್ರಕಾಶ್ ಕುಮಾರದ್ ಸಂಗೀತ, ಶ್ರೀಕಾಂತ್ ವಿಸ್ಸಾ ಸಂಭಾಷಣೆ ಬರೆದಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಪಾತ್ರವರ್ಗ: ರವಿತೇಜ
ಬರಹಗಾರ, ನಿರ್ದೇಶಕ: ವಂಶೀ
ನಿರ್ಮಾಪಕ: ಅಭಿಷೇಕ್ ಅಗರ್ವಾಲ್
ಬ್ಯಾನರ್: ಅಭಿಷೇಕ್ ಅಗರ್ವಾಲ್ ಆರ್ಟ್ಸ್
Presents: ತೇಜ್ ನಾರಾಯಣ ಅಗರ್ವಾಲ್
ಸಹ ನಿರ್ಮಾಪಕ: ಮಯಾಂಕ್ ಸಿಂಘಾನಿಯಾ
ಸಂಭಾಷಣೆ: ಶ್ರೀಕಾಂತ್ ವಿಸ್ಸಾ
ಸಂಗೀತ ನಿರ್ದೇಶಕ: ಜಿವಿ ಪ್ರಕಾಶ್ ಕುಮಾರ್
DOP: ಆರ್.ಮ್ಯಾಥಿ
ಪ್ರೊಡಕ್ಷನ್ ಡಿಸೈನರ್: ಅವಿನಾಶ್ ಕೊಲ್ಲಾ
PRO: ಹರೀಶ್ ಅರಸು