ಯುಗಾದಿ ಹಬ್ಬಕ್ಕೆ ಗುಮ್ಮ ಬಂದ ಗುಮ್ಮ
ಯುಗಾದಿ ಹಬ್ಬದ ಪ್ರಯುಕ್ತವಾಗಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಕನ್ನಡ, ತೆಲುಗು, ತಮಿಳು, ಹಿಂದಿ, ಮಳಯಾಲಂ, ಇಂಗ್ಲೀಷ್ ಭಾಷೆಯಲ್ಲಿ ಟೀಸರ್ ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ.
ಟೀಸರ್ ನೋಡಿದ ಸಿನಿಮಾ ಪ್ರೀಯರು ಹಾಲಿವುಡ್ ರೇಂಜಿನ ಟೀಸರ್ ಎಂದು ಬಣ್ಣಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗವನ್ನು ಮತ್ತೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಕೊಂಡಾಡುತ್ತಿದ್ದಾರೆ.
1.35 ನಿಮಿಷದ ಟೀಸರ್ ನಲ್ಲಿ ಮೊದಲು ಮಕ್ಕಳು ಅಜ್ಜಿಯ ಪುಸ್ತಕವನ್ನು ಹುಡುಕುತ್ತಿದ್ದಾರೆ. ಆದ್ರೆ ಅವರಿಗೆ ಒಂದು ಕಾಗದ ಸಿಗುತ್ತೆ, ಆ ಕಾಗದಲ್ಲಿ ಏನೋ ಗೀಚಿರಲಾಗಿರುತ್ತದೆ. ಅದು ಏನಾಗಿರಬಹುದು ಅಂತಾ ಯೋಚಿಸುತ್ತಾ, ಎಲ್ಲರು ಒಟ್ಟಾಗಿ ಗುಮ್ಮಾ ಎನ್ನುತ್ತಿದ್ದಂತೆ ಸುದೀಪ್ ಅವರ ಫೇಸ್ ರಿವೀಲ್ ಆಗುತ್ತೆ. ಇದರ ಮಧ್ಯೆ ಸಮುದ್ರ, ಬೃಹತ್ ಹಡಗು ಕಾಣಿಸುತ್ತೆ. ಇದು ಹಾಲಿವುಡ್ ಪೈರೆಟ್ಸ್ ಆಫ್ ಕೆರಿಬಿಯನ್ ಸಿನಿಮಾವನ್ನು ನೆನಪಿಸುತ್ತಿದೆ. ಮುಖ್ಯವಾಗಿ ಟೀಸರ್ ನಲ್ಲಿ ಬಿಗಿಎಂ ಎಲ್ಲರ ಹೃದಯ ಗೆಲ್ಲುತ್ತಿದೆ. ಜೊತೆಗೆ ಸಿನಿಮಾ ರಿಲೀಸ್ ಡೇಟ್ ಕೂಡ ಇದೇ ವೇಳೆ ಘೋಷಣೆ ಮಾಡಲಾಗಿದೆ. ಈ ಸಿನಿಮಾ ಜುಲೈ 28 ರಂದು ರಿಲೀಸ್ ಆಗಲಿದೆ.