Kaun Banega CRorepathi 14 : ಪ್ರೋಮೋ ರಿಲೀಸ್
ಮುಂಬೈ: ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ “ಕೌನ್ ಬನೇಗಾ ಕರೋಡ್ ಪತಿ” ಸೀಸನ್ 14 ಅತಿ ಶೀಘ್ರವೇ ಬರಲಿದೆ.. ಈಗಾಗಲೇ ಶೋನ ಮೇಕರ್ಸ್ ಈ ಸೀಸನ್ ನ ಪ್ರೋಮೋ ರಿಲೀಸ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಶುರುವಾಗಿದೆ.. ಎಲ್ಲರೂ ಈ ಸೀಸನ್ ಗಾಗಿ ಸಖತ್ ಎಕ್ಸೈಟ್ ಆಗಿದ್ದಾರೆ..
ಪ್ರೋಮೋದಲ್ಲಿ, ಗ್ರಾಮೀಣ ಯುವ ದಂಪತಿಗಳು ಬೆಳದಿಂಗಳ ರಾತ್ರಿಯಲ್ಲಿ ಮಂಚದ ಮೇಲೆ ಮಲಗಿದ್ದಾರೆ. ಪತಿ ತನ್ನ ಹೆಂಡತಿಯನ್ನು ಸ್ವಿಟ್ಜರ್ಲೆಂಡ್ಗೆ ಒಂದು ದಿನ ಕರೆದುಕೊಂಡು ಹೋಗುತ್ತೇನೆ, ದೊಡ್ಡ ಮನೆಯನ್ನು ಖರೀದಿಸುತ್ತೇನೆ ಮತ್ತು ಅವರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತೇನೆ ಎಂದು ಭರವಸೆ ನೀಡುತ್ತಿರುವುದು ಕಂಡುಬರುತ್ತದೆ.
ಅವನ ಭರವಸೆಗಳನ್ನು ಕೇಳಿದ ನಂತರ ಹೆಂಡತಿ ನಸುನಾಚುತ್ತಾ ಅವರ ಪತಿಯನ್ನ ಹುರಿದುಂಬಿಸುತ್ತಾರೆ. ಆದ್ರೆ ಅದಾಗಿ ವರ್ಷಗಳು ಕಳೆದರು.. ದಂಪತಿಗಳು ತಮ್ಮ ವೃದ್ಧಾಪ್ಯದಲ್ಲಿ ಇದೇ ರೀತಿಯ ಪರಿಸ್ಥಿತಿಯಲ್ಲಿ ಒಂದೇ ಹಾಸಿಗೆಯ ಮೇಲೆ ಮಲಗಿರುವುದು ಕಂಡುಬರುತ್ತದೆ. ಪತಿ ಮತ್ತೊಮ್ಮೆ ತನ್ನ ಹೆಂಡತಿಗೆ ಅದೇ ವಿಷಯಗಳನ್ನು ಭರವಸೆ ನೀಡುತ್ತಾರೆ ಆದರೆ ಈ ಸಮಯದಲ್ಲಿ ಹೆಂಡತಿ ಸ್ವಲ್ಪವೂ ಖುಷಿಯಾಗಿರುವುದಿಲ್ಲ.
ಈ ದೃಶ್ಯಕ್ಕೆ ಅಮಿತಾಬ್ ಬಚ್ಚನ್ ಅವರ ಧ್ವನಿ ಕೇಳಿಸುತ್ತದೆ.. ದೊಡ್ಡ ಕನಸುಗಳನ್ನು ಕಾಣುವುದು ಮತ್ತು ದೊಡ್ಡ ಕನಸುಗಳ ಬಗ್ಗೆ ಸಂತೋಷವಾಗಿರುವುದು ಸಾಕಾಗುವುದಿಲ್ಲ ಎಂದು ಅವರು ಸೂಚಿಸುತ್ತಾರೆ. ದೊಡ್ಡ ಕನಸು ಈಡೇರಿಸಿಕೊಳ್ಳಲು ಪ್ರೋತ್ಸಾಹಿಸುತ್ತಾರೆ.. “ಸಪ್ನೆ ದೇಖ್ ಕೆ ಖುಷ್ ಮತ್ ಹೋಜೈಯೆ. ಉನ್ಹೇ ಪೂರಾ ಕರ್ನೇ ಕೆ ಲಿಯೇ ಫೋನ್ ಉಟಾಯಿಯೇ. 9 ಏಪ್ರಿಲ್, ರಾತ್ 9 ಬಜೆ ಸೆ ಶುರು ಹೋರಾಹೆ ಹೈ ಮೇರೆ ಸವಾಲ್ ಔರ್ ಆಪ್ಕೆ ಕೆಬಿಸಿ ರಿಜಿಸ್ಟ್ರೇಷನ್ ಎನ್ನುತ್ತಾರೆ…
ಕೌನ್ ಬನೇಗಾ ಕರೋಡ್ಪತಿ 2000 ರಿಂದ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಕಳೆದ ವರ್ಷ, ಕಾರ್ಯಕ್ರಮವನ್ನ ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ನೆರವೇರಿಸಿಕೊಟ್ಟಿದ್ದರು.