Keerthi Suresh : ಕೀರ್ತಿ ಮೇಲೆ ಮಹೇಶ್ ಫ್ಯಾನ್ಸ್ ಗರಂ..!
ಮಹೇಶ್ ಬಾಬು ಅಭಿನಯದ ಬಹುನಿರೀಕ್ಷೆಯ ಸಿನಿಮಾ ಸರ್ಕಾರು ವಾರಿ ಪಾಠ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.. ಈ ಸಿನಿಮಾದಲ್ಲಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಅವರು ನಟಿಸಿದ್ದಾರೆ.. ಸೌತ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟಿಯರ ಪೈಕಿ ಕೀರ್ತಿ ಸುರೇಶ್ ಸಹ ಒಬ್ರು.
ಆದರೆ ಮಹೇಶ್ ಬಾಬು ಅಭಿಮಾನಿಗಳು ಯಾಕೋ ಕೀರ್ತಿ ಮೇಲೆ ಗರಂ ಆಗಿದ್ದಾರೆ. ಅವರ ಪ್ರಕಾರ, ಕೀರ್ತಿ ಸುರೇಶ್ ಇನ್ನೂ ಟಾಲಿವುಡ್ ಸಿನಿಮಾರಂಗಕ್ಕೆ ಮಹತ್ವ ಕೊಟ್ಟಿಲ್ಲ.. ಇನ್ನೂ ಕಾಲಿವುಡ್ ಅನ್ನು ತಮ್ಮ ಆದ್ಯತೆಯ ಪಟ್ಟಿಯಲ್ಲಿ ಇರಿಸಿಕೊಂಡಿದ್ದಾರೆ.
ಕೀರ್ತಿ ಸುರೇಶ್ ಅವರು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಸರ್ಕಾರ ವಾರಿ ಪಾಟ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಅವರು ಅದರ ಬಗ್ಗೆ ಹೆಚ್ಚು ಉತ್ಸುಕರಾಗಿಲ್ಲ ಎಂದು ಮಹೇಶ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ..
ಅಷ್ಟೇ ಅಲ್ದೇ ಈ ಸಿನಿಮಾ ಬಗ್ಗೆ ಕೀರ್ತಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪ್ರಚಾರ ಮಾಡದೇ ಇರೋದು ಅಭಿಮಾನಿಗಳನ್ನ ಕೆರಳಿಸಿದೆ..
ತಾನು ಆ ಚಿತ್ರದ ಭಾಗವೇ ಅಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಮಹೇಶ್ ಬಾಬು ಅಭಿಮಾನಿಗಳ ಆಕ್ರೋಶ…
ಅದೇ ಮತ್ತೊಂದೆಡೆ ಕೀರ್ತಿ ಸುರೇಶ್ ಅವರಿಗೂ ಕಾಲಿವುಡ್ ಸಿನಿಮಾ ಬೀಸ್ಟ್ ಗೂ ಯಾವುದೇ ಸಂಬಂಧವಿಲ್ಲ.. ಆದ್ರೂ ಕೀರ್ತಿ ಆ ಸಿನಿಮಾದ ಬಗ್ಗೆ ನಿರಂತರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರು ವಿಜಯ್ ಅವರ ಚಿತ್ರ ಬೀಸ್ಟ್‌ನಲ್ಲಿ ಪೋಸ್ಟ್‌ಗಳು ಮತ್ತು ರೀಲ್ ಗಳನ್ನು ಮರುಟ್ವೀಟ್ ಮಾಡುತ್ತಿದ್ದಾರೆ. ಅರೇಬಿಕ್ ಕುತು ಚಿತ್ರದ ಹಾಡಿನಲ್ಲಿ Instagram ರೀಲ್ ಮಾಡಿದ್ದಾರೆ.
ಆದರೆ ಸರ್ಕಾರ ವಾರಿ ಪಾಟದ ಬಗ್ಗೆ ನಿರಾಸಕ್ತಿ ತೋರುತತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.