ಮಲೈಕಾ ಸಂಚರಿಸುತ್ತಿದ್ದ ಕಾರು ಅಪಘಾತ : ಆಸ್ಪತ್ರೆಗೆ ದಾಖಲಾದ ನಟಿ
ಬಾಲಿವುಡ್ ನ ಹಾಟ್ ಬೆಡಗಿ ಮಲೈಕಾ ಸಂಚರಿಸಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.. ಏಪ್ರಿಲ್ 2 ರ ಮಧ್ಯಾಹ್ನದ ಸುಮಾರಿಗೆ ಈ ಘಟನೆ ಸಂಭವಿಸಿದ್ದು , ಮಲೈಕಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ..
ಪುಣೆಯಿಂದ ಹಿಂತಿರುಗುವಾಗ ರಸ್ತೆ ಹೈವೇನಲ್ಲಿ ಅವರ ಕಾರು ಅಪಘಾತಕ್ಕೀಡಾಗಿದ್ದು , ತಕ್ಷಣವೇ ಮುಂಬೈ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಮೂಲಗಳ ಪ್ರಕಾರ ಮಲೈಕಾಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ದೊಡ್ಡ ಅನಾಹುತ ಸ್ವಲ್ಪದ್ರಲ್ಲೇ ತಪ್ಪಿದೆನ ಎನ್ನಲಾಗಿದೆ.. ಕಾರು ಪುಣೆಯಿಂದ ವಾಪಸ ಆಗುತ್ತಿದ್ದ ವೇಳೆ ಖಾಲಾಪುರ್ ಟೋಲ್ ಪ್ಲಾಜಾ ಬಳಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಲೈಕಾ ಹಣೆಗೆ ಪೆಟ್ಟಾಗಿದೆ..
ಮಲೈಕಾ ಅವರ ತಲೆಗೆ ಸಣ್ಣ ಪ್ರಮಾಣದಲ್ಲಿ ಪೆಟ್ಟಾಗಿದ್ದು ಸಿಟಿ ಸ್ಕ್ಯಾನ್ ಮಾಡಲಾಗಿದೆ. ಯಾವುದೇ ಸಮಸ್ಯೆ ಇರುವುದು ಕಂಡು ಬಂದಿಲ್ಲ ಎಂದು ತಿಳಿದುಬಂದಿದ್ದು , ಇಂದು ಬೆಳಗ್ಗೆ ಆಸ್ಪತ್ರೆಯಿಂದ ನಟಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇನ್ನುಸ್ಥಳೀಯ ಪೊಲೀಸರು ಮಲೈಕಾ ಕಾರು ಅಪಘಾತ ಸಂಬಂಧ FIR ದಾಖಲಿಸಿ, ತನಿಖೆಯನ್ನು ಆರಂಭಿಸಿದ್ದಾರೆ.