RRR 9 ನೇ ದಿನದ ಕಲೆಕ್ಷನ್ : ಹಿಂದಿಯಲ್ಲೇ 150 ಕೋಟಿಗೂ ಅಧಿಕ ಗಳಿಕೆ
ಮಾರ್ಚ್ 25 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ RRR ಸಿನಿಮಾ ಈಗಾಗಲೇ 700 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. ಇನ್ನೂ ಕೆಲವೇ ದಿನಗಳಲ್ಲಿ ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡಬಹುದು ಎನ್ನಲಾಗ್ತಿದೆ..
ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ 9ನೇ ದಿನದ ( ಶುಕ್ರವಾರ) RRR ಬಾಕ್ಸ್ ಆಫೀಸ್ ಕಲೆಕ್ಷನ್ ಹಿಂದಿ ಆವೃತ್ತಿ ಒಂದ್ರಲ್ಲೇ 13.50 ಕೋಟಿ ದಾಟಿದೆ..
ಶನಿವಾರದ ವೇಳೆಗೆ ಹಿಂದಿ ಅವತರಣಿಕೆಯ ಬಾಕ್ಸ್ ಆಫೀಸ್ ಕಲೆಕ್ಷನ್ 150 ಕೋಟಿ ರೂ.ಗಳ ಗಡಿ ದಾಟಿದೆ ಎನ್ನಲಾಗ್ತಿದೆ..
ಅಂದ್ಹಾಗೇ ಮೊದಲ ವಾರದಲ್ಲೇ ಚಿತ್ರವು ವಿಶ್ವದಾದ್ಯಂತ 710 ಕೋಟಿ ರೂ. ಸಂಪಾದಿಸಿದೆ.. ಇನ್ನೂ ಭಾರತದಲ್ಲೇಬಿಡುಗಡೆಯಾದ ಮೊದಲ ವಾರದಲ್ಲಿ ಸಿನಿಮಾ 560 ಕೋಟಿ ರೂ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ..
ಈ ಬಗ್ಗೆ ವಿಶ್ಲೇಷಕ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. “#RRR ಚಿತ್ರಪ್ರೇಮಿಗಳ ಮೊದಲ ಆಯ್ಕೆಯಾಗಿ ಉಳಿದಿದೆ, ಎರಡು ಹೊಸ ಚಿತ್ರಗಳು ರಿಲೀಸ್ ಆದ್ರೂ RRR ಅಬ್ಬರಿಸುತ್ತಿದೆ ಎಂದಿದ್ದಾರೆ..