RRR ಸಿನಿಮಾದಲ್ಲಿ ರಾಮ್ ಚರಣ್ ಪಾತ್ರಕ್ಕೆ ಮೊದಲ ಆಯ್ಕೆ ಈ ಸ್ಟಾರ್ ನಟ..!!
ಮಾರ್ಚ್ 25 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ RRR ಸಿನಿಮಾ ಈಗಾಗಲೇ 700 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.. ಇನ್ನೂ ಕೆಲವೇ ದಿನಗಳಲ್ಲಿ ಬಾಹುಬಲಿ ರೆಕಾರ್ಡ್ ಬ್ರೇಕ್ ಮಾಡಬಹುದು ಎನ್ನಲಾಗ್ತಿದೆ..
ಸಿನಿಮಾದಲ್ಲಿ ರಾಮ್ ಚರಣ್ ಜ್ಯೂ. ಎನ್ ಟಿ ಆರ್ ಅವರ ಪಾತ್ರವನ್ನ ಜನ ಮೆಚ್ಚಿ ಕೊಂಡಾಡ್ತಿದ್ದಾರೆ.. ಅದ್ರಲ್ಲೂ ರಾಮ್ ಚರಣ್ ಅವರ ಪಾತ್ರಕ್ಕೆ ಅದ್ರದ್ದೇ ಆದ ಮಹತ್ವವಿದೆ.. ಆದ್ರೆ ಈ ಸಿನಿಮಾದಲ್ಲಿ ರಾಮ್ ಚರಣ್ ಅವರ ಪಾತ್ರಕ್ಕೆ ಮೊದಲು ಬೇರೆ ಸ್ಟಾರ್ ನಟ ಆಯ್ಕೆಯಾಗಿದ್ದರಂತೆ..
ಅದು ಮತ್ಯಾರು ಅಲ್ಲ ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್.. ಸಿನಿಮಾಗೆ ಕಥೆ ಬರೆದಿರುವ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಅವರು ಕಥೆ ಬರೆಯುವಾಗ ಪವನ್ ಕಲ್ಯಾಣ್ ಅವರನ್ನೇ ತಲೆಯಲ್ಲಿಟ್ಟುಕೊಂಡು ಕಥೆ ರಚಿಸಿದ್ದಾಗಿ ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ಅವರೇ ಹೇಳಿಕೊಂಡಿದ್ದಾರೆ..
ಅದನ್ನು ಪ್ರಕಟ ಮಾಡಿಲ್ಲ. ಆದರೆ ಕಥೆ ಬರೆಯುವಂತಹ ಸಂದರ್ಭದಲ್ಲಿ ಅಂದರೆ ಸಿನಿಮಾ ಸ್ಕ್ರಿಪ್ಟ್ ರೆಡಿಯಾಗುವಂತಹ ಸಂದರ್ಭದಲ್ಲಿ ಈ ಚಿತ್ರಕ್ಕೆ ನಾಯಕ ನಟನಾಗಿ ಪವನ್ ಕಲ್ಯಾಣ್ ಸೂಕ್ತ ಎಂದು ವಿಜಯೇಂದ್ರ ಪ್ರಸಾದ್ ಸೂಚಿಸಿದ್ದರಂತೆ. ನಿರ್ದೇಶಕ ರಾಜಮೌಳಿ ಕೂಡ ಈ ಕಥೆಗೆ ಪವನ್ ಕಲ್ಯಾಣ್ ಪರ್ಫೆಕ್ಟ್ ಎಂದಿದ್ದರಂತೆ.
ಆದ್ರೆ ಈ ಬಗ್ಗೆ ಸಿನಿಮಾ ತಂಡ ಅಂತಿಮವಾಗಿ ನಿರ್ಧರಿಸಿರಲಿಲ್ಲ.. ಫೈನಲ್ ನಿರ್ಧಾರಕ್ಕೂ ಮೊದಲೇ ರಾಜಮೌಳಿ ಅವರು ರಾಮ್ ಚರಣ್ ಅವರನ್ನ ಾಯ್ಕೆ ಮಾಡಿಕೊಂಡರು ಎನ್ನಲಾಗಿದೆ..