ಕಳೆದ ವರ್ಷ ಡಿಸೆಂಬರ್ 17 ರಂದು ಬಿಡುಗಡೆಯಾದ ಪುಷ್ಪ ( Pushpa ) ಸಿನಿಮಾಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ದಿನ ಕಳೆದಂತೆ ಪುಷ್ಪ ಮೇನಿಯಾ ಜೋರಾಯ್ತು. ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ 400 ಕೋಟಿ ಕಲೆಕ್ಷನ್ ಕ್ಲಬ್ ಗೆ ಸೇರಿತು.
ಮುಖ್ಯವಾಗಿ ಬಾಲಿವುಡ್ ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಿ ಟೌನ್ ನಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಸಿನಿಮಾದ ಸೀಕ್ವೆಲ್ ಪುಷ್ಪ 2 ಶೂಟಿಂಗ್ ನಲ್ಲಿ ತಂಡ ಬ್ಯುಸಿಯಾಗಿದೆ.. ಈ ನಡುವೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇದೀಗ ‘ಪುಷ್ಪ 2’ ಸಿನಿಮಾಗೆ ಬೇಡಿಕೆ ಹೆಚ್ಚಿದೆ.
ಅಂದ್ಹಾಗೆ ಪುಷ್ಪ ಸಿನಿಮಾದ ಹೈಲೇಟ್ ಅಂದ್ರೆ ಸಮಂತಾ ಡ್ಯಾನ್ಸ್.. ಊ ಅಂಟಾವಾ ಮಾವ ಊಹು ಅಂಟಾವಾ ಮಾವ ಹಾಡಿಗೆ ಸಮಂತಾ ಸಖತ್ ಸ್ಟೆಪ್ಸ್ ಹಾಕಿದ್ರು.. ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು..
ಅಂದ್ಹಾಗೆ ಇದೀಗ ಸಮಂತಾ ಪಾರ್ಟ್ 2 ನಲ್ಲೂ ಕಾಣಿಸಿಕೊಳ್ತಿದ್ದಾರೆ ಎನ್ನಲಾಗ್ತಿದೆ.. ಆದ್ರೆ ಐಟಂ ಹಾಡಿಗೆ ಹೆಜ್ಜೆ ಹಾಕುತ್ತಿಲ್ಲ ಬದಲಾಗಿ ಸಿನಿಮಾದಲ್ಲಿ ಪಾತ್ರವೊಂದ್ರಲ್ಲಿ ಕಾಣಿಸಿಕೊಳ್ತಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಸದ್ಯಕ್ಕೆ ಹರಿದಾಡ್ತಿರುವ ಕಬರ್ ಹಲ್ ಚಲ್ ಸೃಷ್ಟಿಸಿದೆ..