ತಮಿಳಿನ ಸೂಪರ್ ಸ್ಟಾರ್ ವಿಜಯ್ ಅವರ ಬೀಸ್ಟ್ ಸಿನಿಮಾ ಏಪ್ರಿಲ್ 13 ಕ್ಕೆ ಅಂದ್ರೆ ಕೆಜಿಎಫ್ ರಿಲೀಸ್ ಆಗಲಿರುವ 1 ದಿನದ ಮುಂಚೆಯೇ ರಿಲೀಸ್ ಆಗ್ತಿದೆ.. ಸಿನಿಮಾ ಪ್ರಮೋಷನ್ ಗೆ ಡಿಫರೆಂಟ್ ಸ್ಟ್ರಾಟಜಿ ಬಳಸಿದೆ.. ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಕೆಲ ದಿನಗಳ ಹಿಂದಷ್ಟೇ ಟ್ರೇಲರ್ ಬಿಡುಗಡೆಯಾಗಿದ್ದು, ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದೆ.. ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ..
ನಿನ್ನೆ ನಿರ್ಮಾಪಕರು ಚಿತ್ರದ ಹಿಂದಿ ಡಬ್ಬಿಂಗ್ ಆವೃತ್ತಿಯ ಟ್ರೇಲರ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದಾರೆ.. 6 ಗಂಟೆಗೆ ಟ್ರೇಲರ್ ರಿಲೀಸ್ ಆಗಿದೆ..
ಬಾಕ್ಸ್ ಆಫೀಸ್ ನಲ್ಲಿ KGF 2 ಹಾಗೂ ಬೀಸ್ಟ್ ನಡುಗೆ ದೊಡ್ಡ ಕಾಂಪಿಟೇಷನ್ ಇರಲಿದೆ.. ಹಿಂದಿ ಆವೃತ್ತಿಯಲ್ಲೇ ಸುಮಾರು 600 ಸ್ಕ್ರೀನ್ ಗಳಲ್ಲಿ ಬೀಸ್ಟ್ ರಿಲೀಸ್ ಆಗ್ತಿರುವುದಾಗಿ ಸಿನಿಮಾದ ಮೇಕರ್ಸ್ ಇತ್ತೀಚೆಗೆ ತಿಳಿಸಿರೋದಾಗಿ ವರದಿಯಾಗಿದೆ…
ವಿಜಯ್ ಜೊತೆಗೆ ಬೀಸ್ಟ್ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ವರದಿಗಳ ಪ್ರಕಾರ, ಸಿನಿಮಾದ ಹಿಂದಿ ರಿಮೇಕ್ ಹಕ್ಕುಗಳನ್ನು ಈಗಾಗಲೇ ಉನ್ನತ ಬಾಲಿವುಡ್ ನಿರ್ಮಾಪಕರಿಗೆ ಮಾರಾಟ ಮಾಡಲಾಗಿದೆ.
Urfi Javed : ಟ್ಟೆಯಿಂದ ಮತ್ತೆ ಮತ್ತೆ ಉರ್ಫಿ ಟ್ರೋಲ್..!!