ಗಂಡು ಮಗುವಿಗೆ ಜನ್ಮ ನೀಡಿದ ಕಾಮಿಡಿ ಕ್ವೀನ್ ಭಾರತಿ ಸಿಂಗ್
ಬಾಲಿವುಡ್ ನ ಖ್ಯಾತ ಹಾಸ್ಯ ನಟಿ , ನಿರೂಪಕಿಯಾಗಿರುವ ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ..
ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಈ ವಿಚಾರವನ್ನ ತಿಳಿಸಿದ್ದಾರೆ..
ಸಾಮಾಜಿಕ ಜಾಲತಾಣದಲ್ಲಿ ಭಾರರತಿ ಹಾಗೂ ಹರ್ಷ್ ಗೆ ನೆಟ್ಟಿಗರು , ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಹರ್ಷ್ ಲಿಂಬಾಚಿಯಾ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ” ಇಟ್ಸ್ ಎ ಬಾಯ್ ” ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ಭಾರತಿ ಸಿಂಗ್ ಮಗು ಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಅಂದ್ಹಾಗೆ ಭಾರತಿ ತುಂಬು ಗರ್ಭಿಣಿಯಾಗಿದ್ದರು ಸಹ , ಹೆರಿಗೆಯ ಹಿಂದಿನ ದಿನದ ವರೆಗೂ ಸೆಟ್ ಗೆ ತೆರಳಿ ಕೆಲಸ ಮಾಡಿದ್ದರು.
ಇವರು ಜನಪ್ರಿಯ ಶೋಗಳಲ್ಲಿ ನಿರೂಪಣೆ ಮಾಡಿದ್ದಾರೆ.. ಜನರು ಭಾರತಿ ಸಿಂಗ್ ರನ್ನ ಕಾಮಿಡಿ ಕ್ವೀನ್ ಅಂತಲೇ ಕರೆಯುತ್ತಾರೆ..
ಇನ್ನೂ ಭಾರತಿ ಸಿಂಗ್ ಗೆ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರೂ ಸಹ ವಿಷ್ ಮಾಡ್ತಾ ಇದ್ದಾರೆ.. ಭಾರತಿ ಸಿಂಗ್ ರಿಯಾಲಿಟಿ ಶೋಗಳಲ್ಲೂ ಸಹ ಭಾಗವಹಿಸಿದ್ದರು.. ಅದ್ರಲ್ಲೂ ಖತ್ರೋಂಕೆ ಕಿಲಾಡಿ ಶೋನಲ್ಲಿ ಪತಿ ಜೊತೆಗೆ ಸಹ ಸ್ಪರ್ಧಿಯಾಗಿದ್ದುಉ ವಿಶೇಷ..
Poonam Pandey – Lockup : “ಲೈವ್ ನಲ್ಲಿ ನನ್ನ ಟಿ ಶರ್ಟ್ ತೆಗೆಯುತ್ತೇನೆ”