KGF 2 : ವಿದೇಶದಲ್ಲಿ ಹೊಸ ದಾಖಲೆ ಬರೆದ KGF2
ಮಾರ್ಚ್ 27 ರ ಸಂಜೆ ಸುನಾಮಿಯಂತೆ ಸೋಷಿಯಲ್ ಮೀಡಿಯಾಗೆ ಅಪ್ಪಳಿಸಿದ KGF 2 ಟ್ರೇಲರ್ ಈಗಲೂ ಟ್ರೆಂಡಿಂಗ್ ನಂ.1 ನಲ್ಲಿದೆ.. ಟ್ರೇಲರ್ ನೋಡಿ ನೆಟ್ಟಿಗರ ಹಾರ್ಟ್ ಬೀಟ್ ಹೆಚ್ಚಾಗಿದೆ.. ಅಂದ್ಹಾಗೆ ಟೀಸರ್ ಯಾವ ರೀತಿ ಎಲ್ಲಾ ರೆಕಾರ್ಡ್ ಗಳ ಚಿಂದಿ ಚಿತ್ರಾನ್ನ ಮಾಡಿ ಹಾಕಿತ್ತೋ ಅದೇ ರೀತಿಯೇ KGF 2ಟ್ರೇಲರ್ ಬಾಹುಬಲಿ 2 , ಸಾಹೋ , RRR , ಪುಷ್ಪ ದಂತಹ ಸೂಪರ್ ಹಿಟ್ ಸಿನಿಮಾಗಳ ರೆಕಾರ್ಡ್ ಮಾಡಿದೆ..
ಕನ್ನಡಕ್ಕಿಂತ ತೆಲುಗು , ಹಿಂದಿಯಲ್ಲೇ ಹೆಚ್ಚು ವೀವ್ಸ್ ಗಳಿಸಿರೋದು ಒಂದೆಡೆ.. ಸಿನಿಮಾದ ಎಲ್ಲಾ ಭಾಷೆಗಳ ಟ್ರೇಲರ್ ನ ವೀವ್ಸ್ ಒಟ್ಟುಗೂಡಿ ಹೇಳಿದ್ರೆ , ಬೇರೆಲ್ಲಾ ಸಿನಿಮಾಗಳ ರೆಕಾರ್ಡ್ ಮುಂದೆ ಧೂಳೆಬ್ಬಿಸಿದೆ…
ಸದ್ಯ ಕೆಜಿಎಫ್ 2 ಟೀಮ್ ಪ್ರಚಾರ ಕೆಲಸ ಶುರು ಮಾಡಿಕೊಂಡಿದೆ..
ಅಂದ್ಹಾಗೆ KGF 2 ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ರೆಕಾರ್ಡ್ ಮಾಡಿದೆ… ಈಗ ಸಿನಿಮಾ ಮತ್ತೊಂದು ರೆಕಾರ್ಡ್ ಮಾಡಿದೆ.. ಅದೇನೆಂದ್ರೆ KGF 2 ಸಿನಿಮಾದ ಶೋಗಳ ಟಿಕೆಟ್ ಬಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು , ರಿಲೀಸ್ ಗೆ 11 ದಿನಗಳು ಬಾಕಿ ಇರೋವಾಗಲೇ ಬುಕಿಂಗ್ ಆರಂಭವಾದ ಕೇವಲ 12 ಗಂಟೆಗಳಲ್ಲಿ ಈ ಸಿನಿಮಾದ ಟಿಕೆಟ್ ಸೇಲಾಗಿದೆ..
ಕನ್ನಡದ ಯಾವ ಸಿನಿಮಾಗಳ ಟಿಕೆಟ್ ಗಳು ಸಹ ರಿಲೀಸ್ ಗೆ ಇನ್ನೂ 11 ದಿನಗಳ ಬಾಕಿ ಇರುವಾಗಲೇ ಸೋಲ್ಡ್ ಔಟ್ ಆಗಿಲ್ಲ ಎಂಬುದು ವಿಮರ್ಶಕರು , ವಿಶ್ಲೇಶಕರ ಮಾತುಗಳಾಗಿವೆ.
ಅಂದ್ಹಾಗೆ ಇಡೀ ವಿಶ್ವಾದ್ಯಂತ ರಿಲೀಸ್ ಆಗ್ತಿರುವ ಕನ್ನಡದ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾಗೆ ವಿಶ್ವಾದ್ಯಂತ ಕ್ರೇಜ್ ಇದೆ. ಯುಕೆನಲ್ಲಿ ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ..
ಕೆಜಿಎಫ್ 2 ಸಿನಿಮಾ ಯುಕೆ ವಿತರಕರು ಈಗಾಗಲೇ ಸಿನಿಮಾ ಬುಕ್ಕಿಂಗ್ ಆರಂಭ ಮಾಡಿದ್ದಾರೆ. ಟಿಕೆಟ್ ಬುಕ್ಕಿಂಗ್ ಆರಂಭ ಮಾಡುತ್ತಿದ್ದಂತೆ ಜನರು ಮುಗಿದ್ದಿದ್ದು ಟಿಕೆಟ್ಗಳನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದ್ದು , ಕೇವಲ 12 ಗಂಟೆಯಲ್ಲೇ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ.
ಇನ್ನೂ ಯುಕೆಯಲ್ಲಿ ಟಿಕೆಟ್ ಬುಕ್ ಆಗಿರುವ ಬಗ್ಗೆ ಅಲ್ಲಿ ಸಿನಿಮಾ ವಿತರಣೆ ಮಾಡುತ್ತಿರುವ ಸಂಸ್ಥೆ ಆರ್ಎಫ್ಟಿ ಫಿಲಂಸ್ ಟ್ವೀಟ್ ಮೂಲಕ ತಿಳಿಸಿದ್ದು ಕನ್ನಡ ಸಿನಿಮಾದ ಈ ಸಾಧನೆಗೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..
ಸದ್ಯ ಕೆಜಿಎಫ್ ಸಿನಿಮಾ ರಿಲೀಸ್ ಆದ ನಂತರ ಹೊಸ ದಾಖಲೆ ಬರೆಯುತ್ತಾ ಎಂದು ಅಭಿಮಾನಿಗಳು ಎದುರು ನೋಡ್ತಿದ್ಧಾರೆ.. RRR ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ 1000 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಗಡಿ ದಾಟಲಿದೆ.. KGF 2 ಈ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡುತ್ತಾ,,, ಅಥವ ಬೀಸ್ಟ್ ಮತ್ತೆ ಜರ್ಸಿ ಕೂಡ ಕಾಂಪಿಟೇಷನ್ ನಲ್ಲಿರುವುದು ಬಾಕ್ಸ್ ಆಫೀಸ್ ಕಲೆಕ್ಷನ್ ಗೆ ಪೆಟ್ಟು ನೀಡುತ್ತಾ ,,, ಕಾದು ನೋಡ್ಬೇಕಿದೆ..