ಅನಿಲ್ ಕಪೂರ್ ಪುತ್ರಿ ಬಾಲಿವುಡ್ ನಟಿ ಸೋನಪ್ ಕಪೂರ್ ಹಾಗೂ ಪತಿ ಆನಂದ್ ಅಹುಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ..
ಪ್ರಸ್ತುತ ಮುಂಬೈನಲ್ಲಿ ತಮ್ಮ ಪೋಷಕರ ಜೊತೆಗಿರುವ ಸೋನಮ್ ಆಗಾಗ ಬೇಬಿ ಬಂಪ್ ಫೋಟೋಗಳನ್ನ ಶೇರ್ ಮಾಡಿಕೊಳ್ತಿರುತ್ತಾರೆ.. ನಿನ್ನೆ ಸಂಜೆ ಸೋನಂ ಫ್ಯಾಶನ್ ಡಿಸೈನರ್ ಅಬು ಜಾನಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಅಬು ಜಾನಿ ಸಂದೀಪ್ ಖೋಸ್ಲಾ ಅವರ ಡಿಸೈನರ್ ಉಡುಪನ್ನು ಧರಿಸಿ ದೇವತೆಯಂತೆ ಕಾಣಿಸಿಕೊಂಡಿದ್ದಾರೆ..
ಸೋನಂ ಧರಿಸಿರುವ ಉಡುಗೆಯು ಆಕೆಯ ಬಂಪ್ ಪ್ರದರ್ಶಿಸಿದೆ… ಮಾರ್ಚ್ 21 ರಂದು, ಸೋನಮ್ ಕಪೂರ್ ಅಹೂಜಾ ಅವರ ಜೊತೆಗೆ ಫೋಟೋಗಳನ್ನ Instagram ನಲ್ಲಿ ಹಂಚಿಕೊಳ್ಳುವ ಮೂಲಕ ತಾವು ತಾಯಿಯಾಗುತ್ತಿರುವ ವಿಚಾರವನ್ನ ತಿಳಿಸಿದ್ದರು..