ಉಪೇಂದ್ರ ಮಹೇಶ್ ಬಾಹು ಕಾಂಬಿನೇಷನ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ..!!
ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಚಿರಪರಿಚಿತರೇ.. ಕನ್ನಡ ಹೊರತಾಗಿ ತಮಿಳು , ತೆಲುಗಿನಲ್ಲಿ ಉಪೇಂದ್ರ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಗೊತ್ತಿಲ್ಲದವರೂ ಯಾರೂ ಇಲ್ಲ..
ಈ ಇಬ್ಬರಿಗೂ ಪ್ರತ್ಯೇಕವಾದ ದೊಡ್ಡ ಫ್ಯಾಂಡಮ್ ಇದೆ.. ಬೇರೆಯದ್ದೇ ಕ್ರೇಜ್ ಇದೆ.. ಆದ್ರೆ ಇದೀಗ ಈ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡ್ತಿರೋದು ಆ ಕ್ರೇಜ್ ಲೆವೆಲ್ ನ ಮತ್ತಷ್ಟು ಹೆಚ್ಚಿಸಿದೆ..
ಹೌದು.. ಇತ್ತೀಚೆಗಷ್ಟೇ ತೆಲುಗಿನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈ ಜೀವನಾಧಾರಿತ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿರುವ ಸುದ್ದಿ ಭಾರೀ ಚರ್ಚೆಯಾಗಿತ್ತು..
ಇದೀಗ ಇವರಿಬ್ಬರೂ ಯುವ ನಿರ್ದೇಶಕ ಪರಶುರಾಮ್ ನಿರ್ದೇಶನದ ಸಿನಿಮಾದಲ್ಲಿ ಒಂದಾಗ್ತಿರೋ ಸುದ್ದಿ ಟಾಲಿವುಡ್ ಕಾಲಿವುಡ್ ಅಂಗಳದಲ್ಲಿ ಹಲ್ ಚಲ್ ಸೃಷ್ಟಿಸಿದೆ..
ಹಾರಿಕಾ ಮತ್ತು ಹಾಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಅದ್ಧೂರಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ಈ ಚಿತ್ರದಲ್ಲಿ ಮಹೇಶ್‌ಗೆ ಜೋಡಿಯಾಗಿ ಪೂಜಾ ಹೆಗಡೆ ಅಭಿನಯಿಸುತ್ತಿದ್ದಾರೆ.