ಗ್ರಾಮಿ ಪ್ರಶಸ್ತಿ ಗೆದ್ದ ಭಾರತೀಯ ಮೂಲದ ಫಲ್ಗುಣಿ ಶಾಗೆ ಮೋದಿ ಅಭಿನಂದನೆ
ಸಂಗೀತ ಕ್ಷೇತ್ರದ ಅತ್ಯುತ್ತಮ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ.. ಪ್ರತಿ ಗಾಯಕರು , ಸಂಗೀತ ಜಗತ್ತಿನ ಕಲಾವಿದರು ಈ ಪ್ರಶಸ್ತಿ ಪಡೆಯಬೇಕೆಂಬ ಕನಸು ಕಂಡಿರುತ್ತಾರೆ..
ಇತ್ತೀಚೆಗೆ 2022 ರ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನ್ಯೂಯಾರ್ಕ್ ನ ಭಾರತೀಯ ಮೂಲದ ಗಾಯಕಿ ಫಲ್ಗುಣಿ ಶಾ ಅವರನ್ನ ಇ0ದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
I am so honored Honorable Prime Minister Modiji. Thank you for you encouragement. This Award is for India. I'm the daughter of India and it is my dream to see India getting represented again and again on a global level! @RecordingAcad
— Falu (@FaluMusic) April 5, 2022
ಫಾಲು ಎಂಬ ಹೆಸರಿನಿಂದ ಕರೆಯಲ್ಪಡುವ ಇವರು ಅತ್ಯುತ್ತಮ ಮಕ್ಕಳ ಆಲ್ಬಮ್ ವಿಭಾಗದಲ್ಲಿ ‘ಎ ಕಲರ್‌ಫುಲ್ ವರ್ಲ್ಡ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ.
“ಗ್ರ್ಯಾಮಿಸ್‌ನಲ್ಲಿ ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಂ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಫಲ್ಗುಣಿ ಶಾ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.