KGF 2 – ಗ್ರೀಸ್ ನಲ್ಲಿ ಹೊಸ ದಾಖಲೆ ಬರೆದ ಸಿನಿಮಾ..!! ಏನದು..??
ಮಾರ್ಚ್ 27 ರ ಸಂಜೆ ಸುನಾಮಿಯಂತೆ ಸೋಷಿಯಲ್ ಮೀಡಿಯಾಗೆ ಅಪ್ಪಳಿಸಿದ KGF 2 ಟ್ರೇಲರ್ ಈಗಲೂ ಟ್ರೆಂಡಿಂಗ್ ನಂ.1 ನಲ್ಲಿದೆ.. ಟ್ರೇಲರ್ ನೋಡಿ ನೆಟ್ಟಿಗರ ಹಾರ್ಟ್ ಬೀಟ್ ಹೆಚ್ಚಾಗಿದೆ.. ಅಂದ್ಹಾಗೆ ಟೀಸರ್ ಯಾವ ರೀತಿ ಎಲ್ಲಾ ರೆಕಾರ್ಡ್ ಗಳ ಚಿಂದಿ ಚಿತ್ರಾನ್ನ ಮಾಡಿ ಹಾಕಿತ್ತೋ ಅದೇ ರೀತಿಯೇ KGF 2ಟ್ರೇಲರ್ ಬಾಹುಬಲಿ 2 , ಸಾಹೋ , RRR , ಪುಷ್ಪ ದಂತಹ ಸೂಪರ್ ಹಿಟ್ ಸಿನಿಮಾಗಳ ರೆಕಾರ್ಡ್ ಮಾಡಿದೆ..
ಕನ್ನಡಕ್ಕಿಂತ ತೆಲುಗು , ಹಿಂದಿಯಲ್ಲೇ ಹೆಚ್ಚು ವೀವ್ಸ್ ಗಳಿಸಿರೋದು ಒಂದೆಡೆ.. ಸಿನಿಮಾದ ಎಲ್ಲಾ ಭಾಷೆಗಳ ಟ್ರೇಲರ್ ನ ವೀವ್ಸ್ ಒಟ್ಟುಗೂಡಿ ಹೇಳಿದ್ರೆ , ಬೇರೆಲ್ಲಾ ಸಿನಿಮಾಗಳ ರೆಕಾರ್ಡ್ ಮುಂದೆ ಧೂಳೆಬ್ಬಿಸಿದೆ…
ಸದ್ಯ ಕೆಜಿಎಫ್ 2 ಟೀಮ್ ಪ್ರಚಾರ ಕೆಲಸ ಶುರು ಮಾಡಿಕೊಂಡಿದೆ..
ಅಂದ್ಹಾಗೆ KGF 2 ಸಿನಿಮಾ ರಿಲೀಸ್ ಗೂ ಮುನ್ನವೇ ಸಾಕಷ್ಟು ರೆಕಾರ್ಡ್ ಮಾಡಿದೆ… KGF 2 ಸಿನಿಮಾದ ಶೋಗಳ ಟಿಕೆಟ್ ಬಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು , ಇತ್ತೀಚೆಗೆ ಬ್ರಿಟನ್ ನಲ್ಲಿ ಬುಕಿಂಗ್ ಆರಂಭವಾದ 12 ಗಂಟೆಯಲ್ಲಿ 5000 ಸಾವಿರ ಟಿಕೆಟ್ ಸೇಲಾದದ ರೆಕಾರ್ಡ್ ಮಾಡಿತ್ತು.. ಈಗ ಈ ಸಿನಿಮಾ ವಿದೇಶದಲ್ಲಿ ಮತ್ತೊಂದು ದಾಖಲೆ ಬರೆದಿದೆ.. ಅದೇನೆಂದ್ರೆ ಗ್ರೀಸ್ ನಲ್ಲಿ ರಿಲೀಸ್ ಆಗ್ತಿರುವ ಮೊದಲ ಸೌತ್ ಇಂಡಿಯನ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ..