ಪತಿ ನಿಕ್ ಗಾಗಿ ಚೀರ್ ಲೀಡರ್ ಆದ ಪ್ರಿಯಾಂಕಾ ಚೋಪ್ರಾ..!!!
ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲೂ ಗುರುತಿಸಿಕೊಂಡಿದ್ದಾರೆ.. ಅಮೆರಿಕಾದ ಖ್ಯಾತ ಗಾಯಕ ನಿಕ್ ಜಾನಸ್ ಜೊತೆಗೆ ಮದುವೆಯಾದ ನಂತರ ಅಮೆರಿಕಾದಲ್ಲೇ ಸೆಟಲ್ ಆಗಿರುವ ನಟಿ ಆಗಾಗ ಪತಿ ಜೊತೆಗಿನ ಫೋಟೋ ವಿಡಿಯೋಗಳನ್ನ ಶೇರ್ ಮಾಡಿಕೊಳ್ತಾ ಇರುತ್ತಾರೆ..
ಇತ್ತೀಚೆಗೆ ನಿಕ್ ಜಾನಸ್ ಮೈದಾನದಲ್ಲಿ ಬೇಸ್ ಬಾಲ್ ಆಡಿದ್ದು , ಗ್ರೌಂಡ್ ಹೊರಗೆ ಪಿಗ್ಗಿ ಪತಿಗಾಗಿ ಚೀರ್ ಮಾಡುತ್ತಾ ಚೀರ್ ಲೀಡರ್ ನಂತೆಯೇ ಪರಿವರ್ತನೆಗೊಂಡಿದ್ದು ಕಂಡುಬಂದಿದೆ..