ರಶ್ಮಿಕಾ ಬರ್ತ್ ಡೇ : ದಳಪತಿ ಜೊತೆ ಸಿನಿಮಾ ಅನೌನ್ಸ್..!!
ಇಂದು ರಶ್ಮಿಕಾ ಮಂದಣ್ಣ ಬರ್ತ್ ಡೇ.. ಹೀಗಾಗಿ ಅವರಿಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬರ್ತ್ ಡೇ ವಿಷ್ ಮಾಡಿದ್ದಾರೆ.. ಮತ್ತೊಂದೆಡೆ ಅಭಿಮಾನಿಗಳು ಅವರ ಕಾಮನ್ ಡಿಪಿ ಕೂಡ ರಿಲೀಸ್ ಮಾಡಿದ್ದಾರೆ..
ಇದರ ನಡುವೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು , ರಶ್ಮಿಕಾ ದಳಪತಿ ವಿಜಯ್ ಅವರ 66 ನೇ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರೋದನ್ನ ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ..
ಅಂದ್ಹಾಗೆ ಕೆಲ ದಿನಗಳಿಂದ ರಶ್ಮಿಕಾ ವಿಜಯ್ ಅವರ ಮುಂದಿನ ಸಿನಿಮಾಗೆ ನಾಯಕಿ ಎಂಬ ವದಂತಿಗಳಿದ್ದವು.. ಅದಕ್ಕೀಗ ುತ್ತರ ಸಿಕ್ಕಿದ್ದು , ವದಂತಿಗಳು ದಿಟವಾಗಿದೆ..
ವಿಜಯ್ ಅವರ 66 ನೇ ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಸೆಲೆಕ್ಟ್ ಆಗಿರುವ ಕುರಿತು ನಿರ್ಮಾಣ ಸಂಸ್ಥೆ ಹುಟ್ಟು ಹಬ್ಬದಂದು ವಿಶ್ ಮಾಡಿ ಅನೌನ್ಸ್ ಮಾಡಿದೆ. ಈ ಮೂಲಕ ರಶ್ಮಿಕಾ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಜ್ ನೀಡಿದ್ದಾರೆ.
ಅಲ್ಲು ಅರ್ಜುನ್ ಜೊತೆ ನಟಿಸಿದ ಪುಷ್ಪ ಚಿತ್ರದ ಯಶಸ್ಸಿನಲ್ಲಿದ್ದಾರೆ ರಶ್ಮಿಕಾ ಮಂದಣ್ಣ. ಬೀಸ್ಟ್ ಚಿತ್ರದ ಬಿಡುಗಡೆಗೆ ಸಿದ್ಧರಾಗಿದ್ದಾರೆ ದಳಪತಿ ವಿಜಯ್ . ಬೀಸ್ಟ್ ತೆರೆಕಂಡ ನಂತರ ಮುಂದಿನ ಚಿತ್ರೀಕರಣದಲ್ಲಿ ರಶ್ಮಿಕಾ ಮತ್ತು ವಿಜಯ್ ಒಂದಾಗಲಿದ್ದಾರೆ. ಇಂದು ರಶ್ಮಿಕಾ ಹುಟ್ಟುಹಬ್ಬದ ಪ್ರಯುಕ್ತ ನಿರ್ಮಾಣ ಸಂಸ್ಥೆ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ನ ಅಧಿಕೃತ ಟ್ವೀಟ್ ಮಾಡಿ ಸುದ್ದಿ ಪ್ರಕಟಿಸಿದೆ. “ಪ್ರತಿಭಾವಂತ ಮತ್ತು ಸುಂದರ ರಶ್ಮಿಕಾ ಮಂದಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು! ವೆಲ್‌ಕಮ್ ಆನ್‌ಬೋರ್ಡ್ #Thalapathy66 @actorvijay @directorvamshi #RashmikaJoinsThalapathy66 (sic).” ಎಂದು ಟ್ವೀಟ್ ಮಾಡಿದ್ದಾರೆ.