ಮತ್ತೆ ಸಿನಿಮಾದಲ್ಲಿ ಒಂದಾಗ್ತಿದ್ದಾರೆ ಸಮಂತಾ – ನಾಗಚೈತನ್ಯ..!!!
10 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಟಾಲಿವುಡ್ ನ ಸ್ಟಾರ್ ಕಪಲ್ ಸಮಂತಾ ನಾಗಚೈತನ್ಯ ಕೆಲ ತಿಂಗಳುಗಳ ಹಿಂದಷ್ಟೇ ಡಿವೋರ್ಸ್ ಪಡೆದಿದ್ದು ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ..
ಇವರ ಡಿವೋರ್ಸ್ ಸುದ್ದಿಯಿಂದ ಅಭಿಮಾನಿಗಳು ಸಿಕ್ಕಾಪಟ್ಟೆ ಶಾಕ್ ಆಗಿದ್ದರು.. ಇವರಿಬ್ಬರೂ ಸಹ ಈ ವಿಚಾರವಾಗಿ ಮೌನವಾಗಿದ್ರೂ ನೆಟ್ಟಿಗರು ಸೈಲೆಂಟ್ ಇರಲ್ಲ.. ಈವರೆಗೂ ಇಬ್ಬರ ಅಭಿಮಾನಿಗಳೂ ಪರಸ್ಪರರನ್ನ ಟ್ರೋಲ್ ಮಾಡ್ತಾ ಬಂದಿದ್ದಾರೆ.. ಇಬ್ಬರೂ ಸದ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ..
ಈ ಜೋಡಿ ಮತ್ತೆ ಒಂದಾಗಬೇಕೆಂಬ ಆಶಯ ಅಭಿಮಾನಿಗಳದ್ದು.. ಅವರ ಆಸೆ ಕನಸಿಗೆ ಈಗ ಹೊಸ ಭರವಸೆಯಂತೆ ಒಂದು ಸೆನ್ಷೇಷನಲ್ ಸುದ್ದಿ ಟಾಲಿವುಡ್ ಅಂಗಳದಲ್ಲಿ ಬಾರೀ ಸೌಂಡ್ ಮಾಡ್ತಿದೆ..
ಅದೇನೆಂದ್ರೆ ಈ ಈ ಸೂಪರ್ ಹಿಟ್ ಆನ್ ಸ್ಕ್ರೀನ್ ಜೋಡಿ ಮತ್ತೆ ಸಿನಿಮಾಗೆ ಒಂದಾಗುತ್ತಿದ್ದಾರೆ ಅನ್ನೋದು.. ಹೌದು.. ನಂದಿನಿ ರೆಡ್ಡಿ ನಿರ್ದೇಶನದ `ಓ ಬೇಬಿ’ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಈ ಚಿತ್ರದಲ್ಲಿ ಸಮಂತಾ ಮತ್ತು ನಾಗಚೈತನ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದರು.
ಆ ಸಂದರ್ಭದಲ್ಲೇ ನಂದಿನಿ ರೆಡ್ಡಿ, ಹೊಸ ಸ್ಕ್ರೀಪ್ಟ್ ಬಗ್ಗೆ ಹೇಳಿಕೊಂಡಿದ್ದರಂತೆ.. ಕಟೆಂಟ್ ಕೇಳಿ ಆಗ ಸ್ಯಾಮ್ ಮತ್ತು ಚೈ ಸಿನಿಮಾ ಒಪ್ಪಿದ್ದರಂತೆ.. ಈ ಪ್ರಾಜೆಕ್ಟ್ ಈಗ ಕೈಗೆತ್ತುಕೊಳ್ಳಲು ಯೋಜಿಸಿರುವ ನಂದಿನಿ ಅವರು ಮತ್ತೆ ಈ ಜೋಡಿಯನ್ನ ತೆರೆ ಮೇಲೆ ಒಂದಾಗಿಸಲು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗ್ತಿದೆ..