The Kashmir Files 250 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಕ್ರಾಸ್..!!
The Kashmir Files ಸಿನಿಮಾ ಇತ್ತೀಚೆಗೆ ದೇಶಾದ್ಯಂತ ಸಂಚಲನವನ್ನೇ ಸೃಷ್ಟಿಸಿದ ಸಿನಿಮಾ ಅಂದ್ರೂ ತಪ್ಪಾಗೋದಿಲ್ಲ.. ಈ ಸಿನಿಮಾ ಈವರೆಗೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.. ದಿ ಕಾಶ್ಮೀರ್ ಫೈಲ್ಸ್ 300 ಕೋಟಿ ರೂ ಗಡಿ ದಾಟಿದೆ..
ಈ ಸಿನಿಮಾಗೆ ಹಾಗೂ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ.. ಸಿನಿಮಾಗೆ ಪರ ಅಷ್ಟೇ ಅಲ್ದೇ ವಿರೋಧಿ ಅಲೆಯೂ ಎದ್ದಿದ್ದು , ರಾಜಕೀಯವಾಗಿ ಚರ್ಚಾ ವಿಚಾರವೂ ಆಗಿತ್ತು..
ಮಾರ್ಚ್ 11 ರಂದು ಬಿಡುಗಡೆಯಾದ ಈ ಸಿನಿಮಾಗೆ ದೇಶಾದ್ಯಂತ ಥಿಯೇಟರ್ ಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಗ್ತಿದೆ.
ಕಾಶ್ಮೀರ ಫೈಲ್ಸ್ ಬಿಡುಗಡೆಯಾದ ಮೂರು ವಾರಗಳನ್ನು ಪೂರ್ಣಗೊಳಿಸಿದೆ… ಸದ್ಯ ಈಗ ಸಿನಿಮಾದ ಅಬ್ಬರ ತಗ್ಗುತತ್ತಿದೆ..
ಸಾಧಾರಣ ಬಜೆಟ್‌ನಲ್ಲಿ ತಯಾರಿಸಲಾದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಪ್ಯಾಂಡೆಮಿಕ್ ನಂತರ ದೊಡ್ಡ ಮಟ್ಟದಲ್ಲಿ ಅಬ್ಬರಿಸಿದೆ..
ಈ ವರ್ಷದ ಅತಿ ಹೆಚ್ಚು ಗಳಿಕೆಯ ಸಿನಿಮಾಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಹ ಒಂದು
ಸದ್ಯ ದೇಶಾದ್ಯಂತ RRR ಹಾವ ಸೃಷ್ಟಿಯಾಗಿದೆ.. ಮುಂದೆ KGF 2 , ಬೀಸ್ಟ್ ಸಿನಿಮಾಗಳ ಅಬ್ಬರ ಶುರುವಾಗಲಿದೆ.. ಇದೀಗ The Kashmir Files ಅಬ್ಬರ ಬಾಕ್ಸ್ ಆಫೀಸ್ ನಲ್ಲಿ ಗಣನೀಯವಾಗಿ ತಗ್ಗುತ್ತಿದೆ..
ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭಾರಿ ಮೆಚ್ಚುಗೆ ಕಾರಣವಾದ ಅನುಪಮ್ ಖೇರ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಕ್ಲಬ್‌ಗೆ ಸೇರಿದೆ. ಶೀಘ್ರದಲ್ಲೇ 250 ಕೋಟಿ ಗಡಿ ದಾಟಲಿದೆ ಕಾಶ್ಮೀರ್ ಫೈಲ್ಸ್.
ಸಿನಿಮಾ 25 ದಿನ ಪೂರೈಸಿದೆ.. ಅಟ್ಯಾಕ್, ಮೊರ್ಬಿಯಸ್ ಮತ್ತು RRR ಚಿತ್ರಗಳ ನಡುವೆಯೂ ‘ದಿ ಕಾಶ್ಮೀರ್ ಫೈಲ್ಸ್’ ನಾಲ್ಕನೇ ವಾರದಲ್ಲಿ ರೂ 250 ಕೋಟಿ ಕ್ಲಬ್‌ಗೆ ಪ್ರವೇಶಿಸಲು ಸಿದ್ಧವಾಗಿದೆ. ಆದರೆ, ವಿವೇಕ್ ಅಗ್ನಿಹೋತ್ರಿ ಅವರ ಚಿತ್ರವು ಕಳೆದ 25 ನೇ ದಿನದಲ್ಲಿ ನಿನ್ನೆ ಅತಿ ಕಡಿಮೆ ವಹಿವಾಟು ಮಾಡಿದೆ.
ನಾಲ್ಕನೇ ಸೋಮವಾರದಂದು, ‘ದಿ ಕಾಶ್ಮೀರ್ ಫೈಲ್ಸ್’ ಬಾಕ್ಸ್ ಆಫೀಸ್‌ನಲ್ಲಿ 1 ಕೋಟಿ ಗಳಿಸಿತು. ಇದರೊಂದಿಗೆ ಅನುಪಮ್ ಖೇರ್ ಅಭಿನಯದ ಚಿತ್ರದ ಒಟ್ಟು ಕಲೆಕ್ಷನ್ 245.49 ಕೋಟಿ ರೂ.ಗೆ ಏರಿಕೆಯಾಗಿದೆ.