‘Beast’ ತೆಲುಗು ಟ್ರೇಲರ್ ಹೆಸರಿಗೆ ತಕ್ಕಂತೆ ಇದೆ… ಬೆಂಕಿಯಾಗಿದೆ…!!
‘Beast’ ತೆಲುಗು ಟ್ರೇಲರ್ : ದಳಪತಿ ವಿಜಯ್ ಅವರು ಗೂಢಚಾರಿಯಾಗಿ ( SPY) ಆಗಿ ಕಾಣಿಸಿಕೊಳ್ತಿರುವ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಬೀಸ್ಟ್ ನ ತಮಿಳಿನ ಟ್ರೇಲರ್ ಏಪ್ರಿಲ್ ಆರಂಭದಲ್ಲೇ ರಿಲೀಸ್ ಆಗಿ ಧೂಳೆಬ್ಬಿಸಿದೆ.. ಈಗ ತೆಲುಗಿನ ವರ್ಷನ್ ಟ್ರೇಲರ್ ಸಹ ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ.. ಬೀಸ್ಟ್ ಅನ್ನೋ ಹೆಸರಿಗೆ ತಕ್ಕಂತೆಯೇ ಡೇರಿಂಗ್ ಅವತಾರದಲ್ಲಿ ಕಾಣಿಸಿಕೊಂಡಿರುವ ದಳಪತಿ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ಧಾರೆ..
ಏಪ್ರಿಲ್ 13 ರಂದು ಈ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ.. ಟ್ರೇಲರ್ ಉಸಿರು-ತೆಗೆದುಕೊಳ್ಳುವ ಆಕ್ಷನ್ ಸೀಕ್ವೆನ್ಸ್‌ಗಳಿಂದ ತುಂಬಿದೆ, ನಾಯಕ ( VIJAY) ಭಯಾನಕ ಭಯೋತ್ಪಾದಕರೊಂದಿಗೆ ಹೋರಾಡುವ ಮೂಲಕ ತನ್ನ ಶೌರ್ಯವನ್ನು ತೋರಿಸಿದ್ದಾರೆ.
ಹೈದರಾಬಾದ್‌ನ ಈಸ್ಟ್ ಕೋಸ್ಟ್ ಮಾಲ್ ಎಂಬ ಶಾಪಿಂಗ್ ಮಾಲ್ ಅನ್ನು ಭಯೋತ್ಪಾದಕರು ಹೈಜಾಕ್ ಮಾಡಿರುತ್ಥಾರೆ ಎಂದು ಟ್ರೇಲರ್ ಆರಂಭವಾಗುತ್ತದೆ.. ವಿಜಯ್ ನಟಿಸಿದ ಪಾತ್ರ ವೀರರಾಘವ ಎಂಬ ಭಾರತೀಯ ಸೈನಿಕನು ಮಾಲ್‌ನ ಒಳಗಿರುವುದು ಗೊತ್ತಾಗುತ್ತದೆ.. ಆನಂತರವೇ ಶುರುವಾಗುತ್ತದೆ ಭರಪೂರ ಆಕ್ಷನ್ಸ್.. ಪೂಜಾ ಹೆಗ್ಡೆ ಸಿನಿಮಾದ ನಾಯಕಿ..