ಗಟ್ಟಿಮೇಳದ “ಆದ್ಯ” ಅನ್ವಿತಾ ಸಾಗರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್..!!
ಗಟ್ಟಿ ಮೇಳ ಧಾರವಾಹಿಯಲ್ಲಿ ವೇದಾಂತ್ ತಂಗಿ ಪಾತ್ರದಲ್ಲಿ , ಬಜಾರಿ ಅಮೂಲ್ಯಗೆ ಅತ್ತಿಗೆ ಪಾತ್ರದಲ್ಲಿ ಮಿಂಚುತ್ತಿರುವ ನಟಿ ನಟಿ ಅನ್ವಿತಾ ಸಾಗರ್ ಅವರ ಆದ್ಯ ಪಾತ್ರ ಪ್ರೇಕ್ಷಕರಿಗೆ ತುಂಬಾ ಹಿಡಿಸಿದೆ.. ಲೈವ್ಲೀ ಪಾತ್ರದಲ್ಲಿ ಮುದ್ದು ಮುದ್ದು ಮಾತನಾಡ್ತಾ , ಮುದ್ದಾಗಿ ಡ್ರೆಸ್ ಮಾಡಿಕೊಂಡು ., ಮುದ್ದು ನಗುವಿನ ಮೂಲಕವೇ ಮನೆ ಮಾತಾಗಿರೋ ಈ ಬೆಡಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್..
ಆಗಾಗ ರೀಲ್ಸ್ ಕೂಡ ಮಾಡುತ್ತಾ ಅಭಿಮಾನಿಗಳನ್ನ ರಂಜಿಸುತ್ತಿರುತ್ತಾರೆ..
ಅನ್ವಿತಾ ಇವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 20 ಫೆಬ್ರವರಿ 1992 ರಂದು ಜನಿಸಿದರು.
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಜೋಸೆಫ್ ಹೈಯರ್ ಪ್ರೈಮರಿ ಇಂಗ್ಲಿಷ್ ಸ್ಕೂಲ್ ಹಾಗೂ ಪ್ರೌಢ ಶಿಕ್ಷಣವನ್ನು ನಿರ್ಮಲಾ ಗರ್ಲ್ಸ್ ಹೈಸ್ಕೂಲ್ , ಸಾಗರದಲ್ಲಿ ಪಡೆದರು.ನಂತರ ಮಂಗಳೂರಿನ ಶಾರದಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು, ಬಿ.ಬಿ.ಎ ಪದವಿ ಮತ್ತು ಎಂ.ಬಿ.ಎ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮಂಗಳೂರಿನ ಎಸ್.ಡಿ.ಎಂ ಕಾಲೇಜಿನಲ್ಲಿ ಪುರ್ಣಗೊಳಿಸಿದರು.
ಪ್ರಸ್ತುತ ಗಟ್ಟಿ ಮೇಳ ಧಾರವಾಹಿಯಲ್ಲಿ ನಟಿಸುತ್ತಿರುವ ನಟಿ , ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಜನಮನ ಸೆಳೆಯುತ್ತಿದ್ದಾರೆ.. ಮುಂದೆ ಅವರು ಅನೇಕ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ..
https://www.instagram.com/reel/Cbr_Y9boI9P/?utm_source=ig_web_copy_link