KGF 2 Gagana Nee Song : ಮಾಸ್ ಅಲ್ಲ ಎಮೋಷನಲ್..!!
ಇತ್ತೀಚೆಗಷ್ಟೇ ಯೂಟ್ಯೂಬ್ ನಲ್ಲಿ ‘ತೂಫಾನ್’ ಎಬ್ಬಿಸಿತ್ತು KGF 2 ಹಾಡು.. ಅದೊಂದು ಪವರ್ ಪ್ಯಾಕ್ಡ್ ಹಾಡಾಗಿತ್ತು… ರೋಮಾಂಚನಕಾರಿ , ಥ್ರಿಲ್ಲಿಂಗ್ ಆಗಿತ್ತು.. ಅದಾದ ನಂತರ ಟ್ರೇಲರ್ ರಿಲೀಸ್ ಮಾಡಿ ಅಭಿಮಾನಿಗಳ ಕಾತರತೆ ಹೆಚ್ಚಿಸಿದ್ದ ಸಿನಿಮಾ ಇದೀಗ ಮತ್ತೊಂದು ಹಾಡು ರಿಲೀಸ್ ಮಾಡಿದೆ.. ಇದು ಮಾಸ್ ಅಲ್ಲ ಎಮೋಷನಲ್ ಸಾಂಗ್..
ಹೃದಯ ಮೀಟುವ , ಮನಸ್ಸು ನಾಟುವ , ರಾಕಿ ಬಾಯ್ ಕಥೆ ಸಾರುವ , ತಾಯಿಯ ಸೆಂಟಿಮೆಂಟ್ ಸಾರುವ ಅಧ್ಬುತ ಲಿರಿಕ್ಸ್ ಗಳ , ಮನಮುಟ್ಟುವ ಮ್ಯೂಸಿಕ್ ಹೊಂದಿರುವ ಹಾಡಿದೆ.. ಗಗನ ನೀ ಎಂದು ಶುರುವಾಗುವ ಈ ಹಾಡಿಗೆ ಯೂಟ್ಯೂಬ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.. ಹಾಡನ್ನ ನೆಟ್ಟಿಗರು ಕೊಂಡಾಡುತ್ತಾ ನಾನಾ ಕಮೆಂಟ್ ಗಳನ್ನ ಮಾಡ್ತಿದ್ದಾರೆ.. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ 4 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.. ಸಾವಿರಾರು ಲೈಕ್ಸ್ , ಕಮೆಂಟ್ಸ್ ಗಳು ಹರಿದುಬಂದಿದೆ..
ರವಿ ಬಸ್ರೂರು ಅವರ ಸಂಗೀತ ನಿರ್ದೇಶನದ ಈ ಅದ್ಭುತ ಹಾಡಿಗೆ ಜೀವ ತುಂಬಿರುವವರು ಸುಚೇತಾ ಬಸ್ರೂರು.. ಕಿನ್ನಾಲ್ ರಾಜ್ ಅವರ ಲಿರಿಕ್ಸ್ ಸದಾ ಮನದಲ್ಲಿ ಉಳಿಯುವಂತಿದೆ..