Rakshith Shetty – Rashmika : ರಶ್ಮಿಕಾ ಬರ್ತ್ ಡೇಗೆ ವಿಶ್ ಮಾಡಿದ ರಕ್ಷಿತ್ ಶೆಟ್ಟಿ…
ಇಂದು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ನಟಿಯರ ಲಿಸ್ಟ್ ನಲ್ಲಿ ರಶ್ಮಿಕಾ ಮಂದಣ್ಣ ಹೆಸರು ಗಳಿಸಿರುವುದಕ್ಕೆ ಕಾರಣ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ.. ಸಿನಿಮಾದಲ್ಲಿ ಅವರಿಗೆ ಅವಕಾಶ ಕೊಟ್ಟ ಮಾಜಿ ಪ್ರಿಯಕರ ನಟ ರಕ್ಷಿತ್ ಶೆಟ್ಟಿ ಅವರು..
ರಶ್ಮಿಕಾ ಸದ್ಯ ಟಾಲಿವುಡಡ್ , ಬಾಲಿವುಡ್ , ಕಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ.. ಅವರಿಗೆ ಎಷ್ಟೋ ಅಭಿಮಾನಿಗಳೂ ಇದ್ದಾರೆ.. ಆದ್ರೆ ಅಭಿಮಾನಿಗಳಷ್ಟೇ ಅವರನ್ನ ದ್ವೇಶಿಸುವವರ ಸಂಖ್ಯೆಯೂ ಇದೆ.. ಅದ್ರಲ್ಲೂ ಕನ್ನಡದವರಿಂತೂ ರಶ್ಮಿಕಾ ಕಂಡ್ರೆ ಅಷ್ಟಕಷ್ಟೇ.. ಕನ್ನಡ ಕಡೆಗಣನೆ , ರಕ್ಷಿತ್ ಶೆಟ್ಟಿ ಜೊತೆಗೆ ಎಂಜೇಜ್ ಮೆಂಟ್ ಮುರಿದುಕೊಂಡಿದ್ದು ಸೇರಿ ಇನ್ನೂ ಹಲವಾರು ವಿಚಾರಗಳಿಂದ ರಶ್ಮಿಕಾ ಮೇಲೆ ಅನೇಕರಿಗೆ ಕೋವಿದೆ..
ಆಗಾಗ ರಶ್ಮಿಕಾ ಟ್ರೋಲ್ ಆಗ್ತಲೇ ಇರುತ್ತಾರೆ… ಅಂದ್ಹಾಗೆ ಇತ್ತೀಚೆಗೆ ಅಂದ್ರೆ ಏಪ್ರಿಲ್ 5 ಕ್ಕೆ ರಶ್ಮಿಕಾ 26 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅವರಿಗೆ ನಟ ರಕ್ಷಿತ್ ಶೆಟ್ಟಿ ಅವರು ವಿಶ್ ಮಾಡಿ ಅಚ್ಚರಿ ಮೂಡಿಸಿದ್ದಾರೆ..
ಹಾಗಂತ ಖುದ್ದು ರಕ್ಷಿತ್ ಶೆಟ್ಟಿ ಅವರು ವಿಶ್ ಮಾಡಿಲ್ಲಾ…!!!
ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಅವರ ಒಡೆತನದ ಪರಮ್ ಸ್ಟುಡಿಯೋದಿಂದ ಟ್ವಿಟ್ ಮಾಡಿ ರಶ್ಮಿಕಾಗೆ ಶುಭಹಾರೈಸಲಾಗಿದೆ. ರಶ್ಮಿಕಾ ಫೋಟೋ ಹಾಕಿ ‘ಸ್ಟಾರ್ ಮತ್ತು ಸುಂದರವಾದ ನಟಿಗೆ ಶುಭಾಶಯಗಳು. ನಿಮ್ಮ ಜನುಮದಿನ ವಿಶೇಷ, ಸಿನಿಮಾದಿಂದ ಸಿನಿಮಾಗೆ ನಿಮ್ಮ ಅಸಾಧಾರಣ ಶಕ್ತಿಯನ್ನು ಪ್ರಸ್ತುತಪಡಿಸುತ್ತಿದ್ದೀರಿ’ ಎಂದು ಬರೆದು ವವಿಶ್ ಮಾಡಲಾಗಿದೆ..