ಡೇಂಜರ್ ಸಿನಿಮಾ ರಿಲೀಸ್ ಗೆ ಅವಕಾಶ ನೀಡದ INOX , PVR ವಿರುದ್ಧ RGV ಆಕ್ರೋಶ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಯಾರು ಏನು ಅಂದ್ರೂ ತಲೆ ಕಡೆಸಿಕೊಳ್ಳದ ರಾಮ್ ಗೋಪಾಲ್ ವರ್ಮಾ ಒಂದು ರೀತಿಯಾಗಿ ಸೋಲೋ ಮ್ಯಾನ್ ಇದ್ದಂತೆ.
ತಮಗೆ ಇಷ್ಟವಾಗಿದ್ದನ್ನೇ ಮಾಡುತ್ತಾ ಸುದ್ದಿಯಾಗುತ್ತಲೇ ಇರುತ್ತಾರೆ. ಆತ ಮಾಡುವ ಟ್ವೀಟ್ ಎಷ್ಟೋ ಜನರ ನಿದ್ರೆ ಕದಿಯುತ್ತೆ… ಮಾಡೆಲ್ಗಳ ಜತೆ ಬಾರ್ ನಲ್ಲಿ ಪಾರ್ಟಿ ಮಾಡುವುದು ಮತ್ತು ತಮ್ಮದೇ ಸಿನಿಮಾಗಳಲ್ಲಿ ನಟಿಸಿರುವ ನಟಿಯರ ಜತೆ ಪಬ್ ಗಳಲ್ಲಿ ತಮ್ಮಿಷ್ಟ ಬಂದಂತೆ ಇರೋದು.. ಟ್ರೋಲ್ ಆಗೋದು ಇದೆಲ್ಲಾ ಅವರಿಗೆ ಅಭ್ಯಾಸ ಹಾಗೂ ಹವ್ಯಾಸವೂ ಆಗಿಬಿಟ್ಟಿದೆ..
ಪ್ರತಿ ವಿಚಾರದಲ್ಲೂ ಕಾಂಟ್ರವರ್ಸಿ ಮಾಡಿಕೊಳ್ತಾ , ಪ್ರತಿ ವಿಚಾರದಲ್ಲೂ ನೆಗೆಟಿವ್ ಆಗಿಯೇ ಮಾತನಾಡ್ತಾ ,,, ವಿವಾದಗಳನ್ನೇ ಪ್ರೀತಿಸುವ , ಕಾಂಟ್ರವರ್ಸಿ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಅವರು ಇದೀಗ PVRcinemas ಮತ್ತು @INOXCINEMAS ವಿರುದ್ಧ ಆಕ್ರೋಶ ಹೊರಹಾಕಿದ್ದು , ಮಾನವ ಹಕ್ಕುಗಳ ಉಲ್ಲಂಘಿಸಿರುವ ಆರೋಪ ಮಾಡಿದ್ದಾರೆ..
ರಾಮ್ ಗೋಪಾಲ್ ವರ್ಮಾ ಪ್ರಸ್ತುತ ಖತ್ರಾ (ಡೇಂಜರಸ್) ಚಿತ್ರ ಬಿಡುಗಡೆಗೆ ಸಜ್ಜಾಗಿದ್ದಾರೆ. ಅಂದ್ಹಾಗೆ ಇದು ಭಾರತದ ಮೊದಲ ಲೆಸ್ಬಿಯನ್ ಸಿನಿಮಾವಾಗಿದೆ..
ಚಿತ್ರವು ಏಪ್ರಿಲ್ 8 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ಈ ಬಗ್ಗೆ ನಿರ್ಮಾಪಕ RGV ಅವರು ಟ್ವೀಟ್ ಮಾಡಿದ್ದು PVR ಮತ್ತು INOX ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.. ಇವುಗಳು ಸಿನಿಮಾ ಪ್ರದರ್ಶಿಸಲು ನಿರಾಕರಿಸಿದ್ದು ಅದಕ್ಕೆ ಸಿನಿಮಾದ ಥೇಮ್ ಕಾರಣವಾಗಿದೆ.. ಈ ಚಿತ್ರವು ಇಬ್ಬರು ಮಹಿಳಾ ಪ್ರೇಮಿಗಳ ಮೇಲೆ ಕೇಂದ್ರೀಕೃತವಾಗಿದೆ.
“@_PVRcinemas @INOXCINEMAS ನನ್ನ ಚಿತ್ರ KHATRA (ಅಪಾಯಕಾರಿ) ಅನ್ನು ಪ್ರದರ್ಶಿಸಲು ನಿರಾಕರಿಸಿದ್ದಾರೆ ಏಕೆಂದರೆ ಅದರ ಥೀಮ್ ಲೆಸ್ಬಿಯನ್ ಆಗಿದೆ.. ಈ ಸಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡದೇ #LGBT ಸಮುದಾಯದ ವಿರುದ್ಧ “@_PVRcinemas @INOXCINEMAS ಮ್ಯಾನೇಜ್ ಮೆಂಟ್ ಗಳು ನಡೆದುಕೊಂಡಿವೆ ಎಂದು ದೂರಿದ್ಧಾರೆ..
“ನಾನು #LGBT ಸಮುದಾಯವನ್ನು ಮಾತ್ರವಲ್ಲದೆ ಎಲ್ಲರೂ @_PVRcinemas ಮತ್ತು @INOXCINEMAS ಅವರ #LGBT ವಿರೋಧಿ ನಿಲುವಿಗೆ ವಿರುದ್ಧವಾಗಿ ನಿಲ್ಲುವಂತೆ ವಿನಂತಿಸುತ್ತೇನೆ .. ಮಾನವ ಹಕ್ಕುಗಳಿಗೆ ಅವಮಾನವಾಗಿದೆ” ಎಂದು ಅವರು ಟ್ವಿಟ್ ಮಾಡಿದ್ದಾರೆ..
ಏಪ್ರಿಲ್ 8, 2022 ರಂದು ಹಿಂದಿ, ತಮಿಳು ಮತ್ತು ತೆಲುಗು ಮೂರೂ ಭಾಷೆಗಳಲ್ಲೂ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ. ಚಿತ್ರದ ಹಿಂದಿ ಹೆಸರು ಖತ್ರಾ/ಡೇಂಜರಸ್, ತಮಿಳು ಆವೃತ್ತಿಗೆ ಕಾದಲ್ ಕಾದಲ್ ಧಾಮ್ ಮತ್ತು ತೆಲುಗು ಆವೃತ್ತಿಗೆ ಮಾ ಇಷ್ಟಮ್ ಎಂದು ಹೆಸರಿಸಲಾಗಿದೆ.
. @_PVRcinemas , @INOXCINEMAS refusing to screen my film KHATRA (DANGEROUS) becos it’s theme is LESBIAN ,and this after Supreme Court repealed section 377 and censor board already passed .it is a clear cut ANTI stand of their managements against #LGBT community pic.twitter.com/GxoHDH7Tjw
— Ram Gopal Varma (@RGVzoomin) April 5, 2022
I request not only the #LGBT community but also everyone to stand up against the management of @_PVRcinemas and @INOXCINEMAS for their ANTI #LGBT stand ..This is an insult to human rights pic.twitter.com/HgaIYw9mbA
— Ram Gopal Varma (@RGVzoomin) April 5, 2022