Rashmika Mandanna : ರಶ್ಮಿಕಾ ನಹೀ…. ‘ಅಫ್ರೀನಾ’…!!! ಹೊಸ ಸಿನಿಮಾದಲ್ಲಿ ಗನ್ ಹಿಡಿದ ‘ಕಿರಿಕ್’ ರಾಣಿ..!!
ಇಂದು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ನಟಿಯರ ಲಿಸ್ಟ್ ನಲ್ಲಿ ರಶ್ಮಿಕಾ ಮಂದಣ್ಣ ಹೆಸರು ಗಳಿಸಿರುವುದಕ್ಕೆ ಕಾರಣ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ.. ಸಿನಿಮಾದಲ್ಲಿ ಅವರಿಗೆ ಅವಕಾಶ ಕೊಟ್ಟ ಮಾಜಿ ಪ್ರಿಯಕರ ನಟ ರಕ್ಷಿತ್ ಶೆಟ್ಟಿ ಅವರು..
ರಶ್ಮಿಕಾ ಸದ್ಯ ಟಾಲಿವುಡಡ್ , ಬಾಲಿವುಡ್ , ಕಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ.. ಅವರಿಗೆ ಎಷ್ಟೋ ಅಭಿಮಾನಿಗಳೂ ಇದ್ದಾರೆ.. ಆದ್ರೆ ಅಭಿಮಾನಿಗಳಷ್ಟೇ ಅವರನ್ನ ದ್ವೇಶಿಸುವವರ ಸಂಖ್ಯೆಯೂ ಇದೆ.. ಅದ್ರಲ್ಲೂ ಕನ್ನಡದವರಿಂತೂ ರಶ್ಮಿಕಾ ಕಂಡ್ರೆ ಅಷ್ಟಕಷ್ಟೇ.. ಕನ್ನಡ ಕಡೆಗಣನೆ , ರಕ್ಷಿತ್ ಶೆಟ್ಟಿ ಜೊತೆಗೆ ಎಂಜೇಜ್ ಮೆಂಟ್ ಮುರಿದುಕೊಂಡಿದ್ದು ಸೇರಿ ಇನ್ನೂ ಹಲವಾರು ವಿಚಾರಗಳಿಂದ ರಶ್ಮಿಕಾ ಮೇಲೆ ಅನೇಕರಿಗೆ ಕೋಪವಿದೆ..
ಆಗಾಗ ರಶ್ಮಿಕಾ ಟ್ರೋಲ್ ಆಗ್ತಲೇ ಇರುತ್ತಾರೆ… ಅಂದ್ಹಾಗೆ ಇತ್ತೀಚೆಗೆ ಅಂದ್ರೆ ಏಪ್ರಿಲ್ 5 ಕ್ಕೆ ರಶ್ಮಿಕಾ 26 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅವರಿಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ರಶ್ಮಿಕಾ ಹುಟ್ಟುಹಬ್ಬದ ಪ್ರಯುಕ್ತ ರಶ್ಮಿಕಾರ ಹೊಸ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.. ಇದ್ರಲ್ಲಿ ಸಖತ್ ಟೆರರ್ ಆಗಿ ಕಾಣಿಸಿಕೊಂಡಿದ್ದಾರೆ ರಶ್ಮಿಕಾ.. ಊರಿಗೆಲ್ಲ ಬೆಂಕಿ ಬಿದ್ದು ಹೊತ್ತಿ ಉರಿವಾಗ ಗನ್ ಹಿಡಿದು ರಸ್ತೆಯಲ್ಲಿ ರಶ್ಮಿಕಾ ನಡೆದುಕೊಂಡು ಬರುತ್ತಿರುವ ಟೀಸರ್ ಅಭಿಮಾನಿಗಳು ಫಿದಾ ಆಗಿದ್ದಾರೆ. ತಲೆಗೆ ಹಿಜಾಬ್ ಧರಿಸಿ ಡೇರಿಂಗ್ ಆಗಿ ರಶ್ಮಿಕಾ ಕಾಣಿಸಿಕೊಂಡಿದ್ದು , ಈ ಸಿನಿಮಾದಲ್ಲಿ ಅವರು ಅಫ್ರೀನಾ ಪಾತ್ರ ನಿಭಾಯಿಸುತ್ತಿದ್ದಾರೆ..
ಟೈಟಲ್ ಇಡದ ಈ ಸಿನಿಮಾಕ್ಕೆ ‘ಯುದ್ಧ ಪೀಡಿತ ಪ್ರೀತಿಯ ಕತೆ’ ಎಂಬ ಕ್ಯಾಪ್ಷನ್ ನೀಡಲಾಗಿದೆ. ಸಿನಿಮಾದಲ್ಲಿ ಅಫ್ರೀನ್ ಎಂಬ ಕಾಶ್ಮೀರಿ ಮುಸ್ಲಿಂ ಯುವತಿಯ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಈ ಸಿನಿಮಾಗೆ ಮಲಯಾಳಂ ನಟ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ..
ಸಿನಿಮಾಗೆ ಸಂಗೀತವನ್ನು ವಿಶಾಲ್ ಚಂದ್ರಶೇಖರ್ ನೀಡಿದ್ದಾರೆ. ಈ ಸಿನಿಮಾವನ್ನು ವೈಜಯಂತಿ ಮೂವೀಸ್ನವರು ಅರ್ಪಿಸುತ್ತಿದ್ದು, ಸ್ವಪ್ನ ಮೂವೀಸ್ ಕಡೆಯಿಂದ ನಿರ್ಮಾಣವಾಗುತ್ತಿದೆ. ಸಿನಿಮಾವನ್ನು ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ.