ರಶ್ಮಿಕಾ… ರಶ್ಮಿಕಾ… ರಶ್ಮಿಕಾ…
ರಶ್ಮಿಕಾ ಮಂದಣ್ಣ…. ಕೊಡಗಿನ ಈ ಬೆಡಗಿ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ.. ಟಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿದ್ದಾರೆ.. ಬಾಲಿವುಡ್ ನಲ್ಲಿ ಬ್ಯಾಕ್ ಟಿ ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ಧಾರೆ.. ಕನ್ನಡ ಸಿನಿಮಾರಂಗದಿಂದ ಹಿಟ್ ಆದವರು.. ಸದ್ಯ ಕನ್ನಡ ಸಿನಿಮಾರಂಗದಿಂದ ದೂರವಿದ್ದಾರೆ..
ಈಗ ಕಾಲಿವುಡ್ ನಲ್ಲಿ ಸೂಪರ್ ಸ್ಟಾರ್ ದಳಪತಿ ಜೊತೆಗೆ ಮಿಂಚಲು ರೆಡಿಯಾಗಿದ್ದಾರೆ.. ದಳಪತಿ ವಿಜಯ್ 66 ನೇ ಸಿನಿಮಾದಲ್ಲಿ ರಶ್ಮಿಕಾ ನಟನೆ ಅಧಿಕೃತವಾಗಿದ್ದು ,,, ಸಾಲದಕ್ಕೆ ಇತ್ತೀಚೆಗೆ ಸಿನಿಮಾ ಮೂಹೂರ್ತವೂ ನೆರವೇರಿದೆ..
ಮುಹೂರ್ತದಲ್ಲಿ ಗೋಲ್ಡ್ ಬಣ್ಣದ ಲೆಹಂಗಾದಲ್ಲಿ ಗಾರ್ಜಿಯಸ್ ಆಗಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ವಿಜಯ್ ಗೆ ಕಾರ್ಯಕ್ರಮದಲ್ಲಿ ದೃಷ್ಟಿ ತೆಗೆದಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗ್ತಿದೆ..
ದಿಲ್ ರಾಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಫಸ್ಟ್ ಟೈಮ್ ದಳಪತಿ ವಿಜಯ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ದಳಪತಿ ವಿಜಯ್ ನಟನೆಯ 66 ನೇ ಚಿತ್ರ ತೆಲುಗು ಮತ್ತು ತಮಿಳು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿ ಬರಲಿದೆ.