ತಲೆ ಬೋಳಿಸಿಕೊಂಡಿದ್ದು ಸುಳ್ಳು : ಜನರನ್ನ ಫೂಲ್ ಮಾಡಿದ ಸಂಜನಾ..!!
ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಸದ್ಯ ಗರ್ಭವತಿಯಾಗಿದ್ದು , ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.. ಫೋಟೋ ವಿಡಿಯೋಗಳನ್ನ ಹಂಚಿಕೊಳ್ತಾ ಇರುತ್ತಾರೆ.. ಡ್ರಗ್ ಲಿಂಕ್ ಕೇಸ್ ನಲ್ಲಿ ಜೈಲು ಸೇರಿ ಮೂರು ತಿಂಗಳ ನಂತರ ಜಾಮೀನಿನ ಮೇಲೆ ಹೊರಬಂದಿದ್ದ ಸಂಜನಾ ಟ್ರೋಲ್ ಆಗೋದು ಸ್ವಲ್ಪ ಕಡಿಮೆಯಾಗಿತ್ತು.. ಆದ್ರೀಗ ಅವರೇ ಸುಮ್ಮನೆ ಇರಲಾರದೇ ಮಾಡಿಕೊಂಡ ಎಡವಟ್ಟಿನಿಂದ ಮತ್ತೊಮ್ಮೆ ಟ್ರೋಲ್ ಆಗ್ತಿದ್ದಾರೆ..
ಹೌದು..!! ಸಂಜನಾ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತಲೆ ಬೋಳಿಸಿಕೊಂಡ ಫೋಟೋ ಶೇರ್ ಮಾಡಿಕೊಂಡು ಇಷ್ಟುದ್ದ ಲೈನ್ ಬರೆದು ಹಾಕಿದ್ದರು.. ಎಷ್ಟೋ ಜನರಿಗೆ ಇದು ಎಡಿಟೆಡ್ ಅಂತ ಗೊತ್ತಿದ್ದರೂ ಇನ್ನೂ ಅನೇಕರು ಮಾತ್ರ ನಿಜವಾಗಲೂ ದೇವರಿಗೆ ಕೂದಲು ಮುಡಿಕೊಟ್ಟಿದ್ದಾರೆ ಎಂದೇ ನಂಬಿದ್ರು..
ಆದ್ರೆ ಇದು ಸುಳ್ಳು ಎಂದು ಅವರೇ ಮತ್ತೊಂದು ವಿಡಿಯೋ ಹರಿಬಿಟ್ಟು ತಿಳಿಸಿದ್ದಾರೆ.. ಈ ಹಿಂದೆ ಬೋಳು ತಲೆಯ ಫೋಟೋ ಹಂಚಿಕೊಂಡಿದ್ದ ಸಂಜನಾ ತಾವು ಕೂದಲನ್ನ ದಾನ ಮಾಡಿದ್ದಾಗಿ ಭಾವನಾತ್ಮಕವಾಗಿ ಸಂದೇಶ ಬರೆದು ಬಿಲ್ಡ್ ಅಪ್ ಕೊಟ್ಟಿದ್ರು.. ಇದರಿಂದ ಹಲವರು ಸಂಜನಾಗೆ ಮೆಚ್ಚುಗೆ ವ್ಯಕ್ತಪಡಿಸಿ ಹೊಗಳಿದ್ದೂ ಉಂಟು.. ಆದರೆ ಅದು ನಿಜವಲ್ಲ ಎಂದು ಗೊತ್ತಾದ ಮೇಲೆ ಎಲ್ಲರೂ ಸಂಜನಾ ವಿರುದ್ಧ ಮುಗಿಬಿದ್ದಿದ್ದಾರೆ..