Amir Khan – Ranbeer Kapoor : ಮತ್ತೆ ಒಂದಾಗ್ತಿದೆ PK ಜೋಡಿ..!!
ಭಾರತೀಯ ಸಿನಿಮಾರಂಗದ ಬಾಕ್ಸ್ ಆಫೀಸ್ ನಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದ ಒನ್ ಆಫ್ ದಿ ಬೆಸ್ಟ್ ಸಿನಿಮಾ , ಅಮಿರ್ ಖಾನ್ ಅಭಿನಯದ ಪಿಕೆ… ಸಿನಿಮಾದಲ್ಲಿ ಅಮಿರ್ ಖಾನ್ ಏಲಿಯನ್ ಆಗಿ ಕಾಣಿಸಿಕೊಂಡಿದ್ದರು.. ಆದ್ರೆ ಇದೇ ಸಿನಿಮಾದಲ್ಲಿ ರಣಬೀರ್ ಕೂಡ ಕೊನೆಯಲ್ಲಿ ಕಾಣಿಸಿಕೊಂಡಿದ್ದರು.. ಅವರೂ ಸಹ ಏಲಿಯನ್ ಆಗಿದ್ದರು..
ಇದೀಗ ಇವರಿಬ್ಬರೂ ಮತ್ತೊಂದು ಸಿನಿಮಾಗಾಗಿ ಒಂದಾಗ್ತಿದ್ದಾರೆ..
2018 ರಲ್ಲಿ ಅವರ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ ವಿಫಲವಾದ ನಂತರ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರು ತಮ್ಮ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಲಾಲ್ ಸಿಂಗ್ ಚಡ್ಡಾ ಮೇಲೆ ಫೋಕಸ್ ಮಾಡಿದ್ದು ಈ ಸಿನಿಮಾ ಈಗ ರಿಲೀಸ್ ಗೆ ರೆಡಿಯಾಗಿದೆ.. ಇದಾದ ನಂತರ ಅಮಿರ್ ಯಾವ ಸಿನಿಮಾದಲ್ಲಿ ನಟಿಸುತ್ತಾರೆಂಬುದು ಅಭಿಮಾನಿಗಳ ಪ್ರಶ್ನೆ…
ಲಾಲ್ ಸಿಂಗ್ ಚಡ್ಡಾ ನಂತರ, ಅವರು ಸೈಫ್ ಅಲಿ ಖಾನ್ ಅವರೊಂದಿಗೆ ವಿಕ್ರಮ್ ವೇದಾ ಹಿಂದಿ ರೀಮೇಕ್‌ನಲ್ಲಿ ಕೆಲಸ ಮಾಡುತ್ತಾರೆ ಎಂದು ಮೊದಲು ಘೋಷಿಸಲಾಯಿತು.
ಆದರೆ ಅವರ ಪ್ರಸ್ತುತ ಚಿತ್ರದ ತಯಾರಿಕೆಗೆ ಸಾಂಕ್ರಾಮಿಕ ಅಡಚಣೆಯಾದ ಪರಿಣಾಮ, ಆ ಚಿತ್ರಗಳಿಂದ ಅಮಿರ್ ಖಾನ್ ಚಿತ್ರದಿಂದ ನಿರ್ಗಮಿಸಬೇಕಾಯಿತು..
ಅಮೀರ್ ಅವರು ಗುಲ್ಶನ್ ಕುಮಾರ್ ಬಯೋಪಿಕ್ ಮೊಘಲ್ ನಲ್ಲಿ ಬಣ್ಣ ಹಚ್ಚಲಿದ್ದಾರೆ.. ನಂತರ ಲಾಲ್ ಸಿಂಗ್ ಚಡ್ಡಾ ಆ ನಂತರ ಅವರು ಹಾಗೂ ರಣಬೀರ್ ಕಪೂರ್ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.. ಅಂದ್ಹಾಗೆ ಪ್ರಸ್ತುತ ರಣಬೀರ್ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ..
ರಾಜ್‌ಕುಮಾರ್ ಹಿರಾನಿಯವರ 2014 ರ ಬ್ಲಾಕ್‌ಬಸ್ಟರ್ PK ಯಲ್ಲಿ ರಣಬೀರ್ ಕೊನೆಯಲ್ಲಿ ದರ್ಶನ ನೀಡಿದ್ದರು.. ಅಮಿರ್ ಸಿನಿಮಾದಲ್ಲಿ ನಾಯಕನಾಗಿದ್ರು..
ಈಗ ಅಮೀರ್ ಹೆಸರಿಡದ ಚಿತ್ರದ ಪ್ರಿ-ಪ್ರೊಡಕ್ಷನ್ ಅನ್ನು ಪ್ರಾರಂಭಿಸಿದ್ದಾರೆ ಮತ್ತು ಅವರೇ ಅದನ್ನು ನಿರ್ಮಿಸಲಿದ್ದಾರೆ ಎನ್ನಲಾಗಿದೆ…