OTT ಯಲ್ಲಿ ಜೇಮ್ಸ್ ಬಿಡುಗಡೆ – ಏ,14ಕ್ಕೆ ಪ್ರೀಮಿಯರ್
ಥಿಯೇಟರ್ನಲ್ಲಿ ಜೇಮ್ಸ್ ಸಿನಿಮಾ ನೋಡಲು ಸಾಧ್ಯವಾಗದೇ ಇರುವವರು ಈಗ ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ಶೀಘ್ರದಲ್ಲೇ ಈ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗಲಿದೆ. ಜೇಮ್ಸ್ ಸಿನಿಮಾದ ಒಟಿಟಿ ಪ್ರೀಮಿಯರ್ಗೆ ದಿನಗಣನೆ ಶುರುವಾಗಿದೆ. ಸೋನಿ ಲಿವ್ (Sony Liv) ಒಟಿಟಿ ಪ್ಲಾಟ್ಫಾರ್ಮ್ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ.
ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರಕ್ಕೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರಿಗೆ ಜೋಡಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ.
ಎರಡು ಶೇಡ್ನ ಪಾತ್ರದಲ್ಲಿ ಪುನೀತ್ ರಾಜ್ಕುಮಾರ್ ಅವರು ಅಬ್ಬರಿಸಿದ್ದಾರೆ. ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಶಿವರಾಜ್ಕುಮಾರ್ ಅವರು ಅಪ್ಪು ಪಾತ್ರಕ್ಕೆ ವಾಯ್ಸ್ ಡಬ್ ಮಾಡಿದ್ದಾರೆ.
‘ಜೇಮ್ಸ್’ ಚಿತ್ರವನ್ನು ಮಾ.17ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಒಟಿಟಿಯಲ್ಲೂ ಪ್ರೇಕ್ಷಕರು ಎಲ್ಲ ಭಾಷೆಗಳಲ್ಲಿ ಸಿನಿಮಾ ನೋಡಬಹುದು. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲೂ ಕೂಡ ಏ.14ರಿಂದ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಸೋನಿ ಲಿವ್ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಅಬ್ಬಬ್ಬಾ…!!!! ಬಿಯರ್ ದಾನ ಮಾಡಿ ಎಂದವರಿಗೆ ಸೋನು ಕೊಟ್ರು ಮಸ್ತ್ ಉತ್ತರ..!!!