Mammootty – Mollywood
ಮಲಯಾಳಂ ಸ್ಟಾರ್ ನಟ ಮಮ್ಮುಟಿ ಒಟ್ಟಾರೆ ಆಸ್ತಿ ಎಷ್ಟು ಗೊತ್ತಾ.,.?? ಲೆಕ್ಕವಿಲ್ಲದಷ್ಟು ದುಬಾರಿ ಕಾರ್ ಗಳ ಮಾಲೀಕ..!!
ಮಾಲಿವುಡ್ ನ ಸೂಪರ್ ಸ್ಟಾರ್ ಆಗಿರುವ ಮಮ್ಮುಟಿ ಅವರು ದಶಕಗಳ ಕಾಲ ಮಲಯಾಳಂ ಸಿನಿಮಾರಂಗದಲ್ಲಿ ಮೆರೆದವರು.. ಇನ್ನೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಈ ನಟನ ಪುತ್ರ ದುಲ್ಕರ್ ಸಲ್ಮಾನ್ ಸಹ ಮಾಲಿವುಡ್ ನ ಸೂಪರ್ ಸ್ಟಾರ್ ಗಳ ಪೈಕಿ ಒಬ್ಬರು..
ಅಂದ್ಹಾಗೆ ಮಮ್ಮುಟಿ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡೆಯ… ಲೆಕ್ಕವಿಲ್ಲದಷ್ಟು ದುಬಾರಿ ಕಾರ್ ಗಳಿವೆ.. ಸುಮಾರು 369 ಕೋಟಿ ರೂಪಾಯಿ ಆಸ್ತಿಯ ಒಡೆಯ ಮಮ್ಮುಟಿ ( ಮೊಹಮ್ಮದ್ ಕುಟ್ಟಿ ಇಸ್ಮಾಯಿಲ್ ಪನಿಪರಂಬಿಲ್ )..
ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಒಬ್ಬರಾಗಿರುವ ಮಮ್ಮುಟಿ ದುಬಾರಿ ಬಂಗಲೆಯಲ್ಲಿ ಕೊಚ್ಚಿಯಲ್ಲಿ ವಾಸವಾಗಿದ್ದು.. ಈ ಬಂಗಲೆಯ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ… ಲೇಕ್ ಸೈಡ್ ನಲ್ಲಿರುವ ಈ ಬಂಗ್ಲೋ ಹೊರಗಿನಿಂದಲೇ ಸಖತ್ ಅಟ್ರ್ಯಾಕ್ಟೀವ್ ಆಗಿದೆ.. ಲಕ್ಸೂರಿಯಸ್ ಬಂಗ್ಲೋ ಆಗಿದೆ..
ಅಂದ್ಹಾಗೆ ಮಮ್ಮುಟಿ ಸೆಪ್ಟೆಂಬರ್ 7, 1951 ರಂದು ಜನಿಸಿದರುಉ.. ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು ಅವರು ಲಾ ಓದಿದ್ದರು.. ಮಂಜೇರಿಯಲ್ಲಿ ಎರಡು ವರ್ಷಗಳ ಕಾಲ ಲಾ ಪ್ರಾಕ್ಟೀಸ್ ಮಾಡಿದ್ದರು. 1971 ರಲ್ಲಿ ಪಾಲಿಚಕಲ್ ಚಿತ್ರದಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು.
ಅಂದಿನಿಂದ ಅವರು ಹಿಂತಿರುಗಿ ನೋಡಿಯೇ ಇಲ್ಲ.. ಸುಮಾರು 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೆ, ಇವರು ತಮ್ಮ ಅತ್ಯುತ್ತಮ ನಟನೆಗೆ 3 ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 7 ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನ ಪಡೆದಿದ್ದಾರೆ.. 13 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅವರು 1979 ರಲ್ಲಿ ಸಲ್ಫತ್ ಕುಟ್ಟಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಅವರ ಪುತ್ರಿ ಸುರುಮಿ ಮತ್ತು ಮಗ ದುಲ್ಕರ್ ಸಲ್ಮಾನ್.. ದುಲ್ಕರ್ ಕೂಡ ಮಾಲಿವುಡ್ ನ ಸೂಪರ್ ಸ್ಟಾರ್ ಗಳ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ..
ಮಮ್ಮುಟ್ಟಿ ಮತ್ತು ಅವರ ಕುಟುಂಬವು ಎರ್ನಾಕುಲಂನ ಕೊಚ್ಚಿಯಲ್ಲಿರುವ ಅವರ ಮನೆಯಲ್ಲಿ ವಾಸವಾಗಿದ್ದಾರೆ. ಈ ಮನೆಯನ್ನು ಅವರ ಇಂಟೀರಿಯರ್ ಡಿಸೈನರ್ ಸೊಸೆ ಮತ್ತು ದುಲ್ಕರ್ ಸಲ್ಮಾನ್ ಅವರ ಪತ್ನಿ ಅಮಲ್ ಸೂಫಿಯಾ ವಿನ್ಯಾಸಗೊಳಿಸಿದ್ದಾರೆ.
ಈ ನಿವಾಸದ ಅಂದಾಜು ಮೌಲ್ಯ ರೂ. 4 ಕೋಟಿಗಳು ಮತ್ತು ಹಚ್ಚ ಹಸಿರಿನ ಉದ್ಯಾನ, ವಿಸ್ತಾರವಾದ ವಾಸಿಸುವ ಪ್ರದೇಶದಲ್ಲಿ ಎಲ್-ಆಕಾರದ ಸೋಫಾ, ಇನ್‌ಬಿಲ್ಡ್ ಹೋಮ್ ಥಿಯೇಟರ್ ಮತ್ತು ಹಲವು ಐಷಾರಾಮಿ ವಸ್ತುಗಳನ್ನು ಒಳಗೊಂಡಿದೆ.
ಕೆಲ ವರದಿಗಳ ಪ್ರಕಾರ ಕೊಚ್ಚಿಯ ನಿವಾಸದ ಹೊರತಾಗಿ, ಮಮ್ಮುಟ್ಟಿ ಕೇರಳದಾದ್ಯಂತ ಅನೇಕ ಇತರ ಆಸ್ತಿಗಳ ಮಾಲೀಕರಾಗಿದ್ದಾರೆ. ವರದಿಯ ಪ್ರಕಾರ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕೆಲವು ಮನೆಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಆಡಿ ಖರೀದಿಸಿದ ಮೊದಲ ದಕ್ಷಿಣ ಭಾರತದ ಸ್ಟಾರ್ ಮಮ್ಮುಟಿ ಎನ್ನಲಾಗಿದೆ.. ಲೆಕ್ಕವಿಲ್ಲದಷ್ಟು ದುಬಾರಿ ಕಾರುಗಳ ಮಾಲೀಕ ಮಮ್ಮುಟಿ ಎನ್ನಲಾಗುತ್ತದೆ..
ದಕ್ಷಿಣ ಭಾರತದ ಸೂಪರ್‌ಸ್ಟಾರ್ ಮಮ್ಮುಟಿ ಮಲಯಾಳಂ ಕಮ್ಯುನಿಕೇಶನ್ ನ ಅಧ್ಯಕ್ಷರಾಗಿದ್ದಾರೆ, ಇದು ಕೈರಲಿ ಟಿವಿ, ಡಬ್ಲ್ಯುಇ ಟಿವಿ ಮತ್ತು ಪೀಪಲ್ ಟಿವಿ ಸೇರಿದಂತೆ ಎಲ್ಲಾ ಮಲಯಾಳಂ ದೂರದರ್ಶನ ಚಾನೆಲ್‌ಗಳನ್ನು ನಡೆಸುತ್ತಿದೆ. ಅವರು ಮೆಗಾಬೈಟ್ಸ್ ಎಂಬ ಪ್ರೊಡಕ್ಷನ್ ಹೌಸ್ ಅನ್ನು ಸಹ ನಡೆಸುತ್ತಿದ್ದಾರೆ.
ಇದರೊಂದಿಗೆ, ಅವರು ಅಕ್ಷಯ ಯೋಜನೆಯ ರಾಯಭಾರಿಯಾಗಿದ್ದಾರೆ, ಮುಖ್ಯವಾಗಿ ಭಾರತದ ದೂರದ ಜಿಲ್ಲೆಗಳನ್ನು ಸಾಕ್ಷರಗೊಳಿಸುವ ಸಲುವಾಗಿ ಅಭಿವೃದ್ಧಿಪಡಿಸಲಾಗಿದೆ.
71ರ ಹರೆಯದಲ್ಲೂ ಮಮ್ಮುಟ್ಟಿ ತಮ್ಮ ವೃತ್ತಿ ಜೀವನದಲ್ಲಿ ಸಕ್ರಿಯರಾಗಿದ್ದಾರೆ. ಅವರ ಪ್ರತಿ ಸಿನಿಮಾಗೆ ಸುಮಾರು 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ… ಅವರ ಪ್ರಸ್ತುತ ನಿವ್ವಳ ಮೌಲ್ಯ ಸುಮಾರು ರೂ. 340 ಕೋಟಿ. ರೂ ಎನ್ನಲಾಗಿದೆ..