ಸೌತ್ ಹಾಗೂ ವಿಜಯ್ ಬೆಸ್ಟ್ : ‘ಬುಟ್ಟಬೊಮ್ಮ’..!!
ಪ್ರಸ್ತುತ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವ ಕನ್ನಡದ ಬೆಡಗಿ , ಕರಾವಳಿ ಚೆಲುವೆ ಪೂಜಾ ಹೆಗ್ಡೆ ಟಾಲಿವುಡ್ ನ ಬಹುಬೇಡಿಕೆಯ ನಟಿ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಂಬರ್ 1 ನಟಿಯಾಗಿದ್ದಾರೆ..
ಹಾಗೆ ನೋಡಿದ್ರೆ ಪೂಜಾ ಹೆಗ್ಡೆ ಮೊದಲಿಗೆ ಮಾಡಿದ್ದು ಬಾಲಿವುಡ್ ಸಿನಿಮಾವೇ ಆದ್ರೂ ಆ ಸಿನಿಮಾದಲ್ಲಿ ಅವರಿಗೆ ಯಶಸ್ಸು ಸಿಕ್ಕಿಲ್ಲ… ಬಾಲಿವುಡಡ್ ನಿಂದ ನಂತರ ಅಂತರ ಕಾಯ್ದುಕೊಂಡ ಬುಟ್ಟಬೊಮ್ಮ ಸೌತ್ ಸಿನಿಮಾಗಳಲ್ಲೇ ಮುಂದುವರೆದರು.
ಪ್ರಸ್ತುತ ಅವರ ಹಾಗೂ ದಳಪತಿ ವಿಜಯ್ ನಟನೆಯ Beast ಸಿನಿಮಾ ರಿಲೀಸ್ ಆಗ್ತಿದೆ.. ಈ ಸಿನಿಮಾ ಮೂಲಕ ಪೂಜಾ ದಶಕದ ನಂತರ ಕಾಲಿವುಡ್ ಗೆ ಅಬ್ಬರದ ಕಮ್ ಬ್ಯಾಕ್ ಮಾಡ್ತಿದ್ದಾರೆ.. ಇದೇ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಿದ್ಧಾರೆ…
ಅಂದ್ಹಾಗೆ ಇತ್ತೀಚೆಗೆ ಅವರ ಬಹುನಿರೀಕ್ಷೆಯ ಪ್ರಭಾಸ್ ನಾಯಕರಾಗಿದ್ದ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಆಗಿತ್ತು.. ಆದ್ರೆ ಈ ಸಿನಿಮಾ ನಿರೀಕ್ಷೆ ಮಟ್ಟದ ಯಶಸ್ಸು ಕಾಣಲಿಲ್ಲ.. ಸದ್ಯ ಬೀಸ್ಟ್ ಸಿನಿಮಾದಲ್ಲಿ ಸಕ್ಸಸ್ ನ ನಿರೀಕ್ಷೆಯಲ್ಲಿರೋ ಪೂಜಾ ಇತ್ತೀಚೆಗೆ ಸೌತ್ ಸಿನಿಮಾ ಇಂಡಸ್ಟ್ರಿಯ ಬಗ್ಗೆ ಮಾತನಾಡಿದ್ಧಾರೆ..
“ಜನರು Beast ಟ್ರೇಲರ್ ಅನ್ನು ಇಷ್ಟಪಡುತ್ತಿರುವುದಕ್ಕೆ ನನಗೆ ಖುಷಿಯಾಗಿದೆ. ನಿರ್ದೇಶಕರಾದ ನೆಲ್ಸನ್ ದಿಲೀಪ್ ಕುಮಾರ್ ಸರ್ ಅವರ ಕೆಲಸದ ಬಗ್ಗೆ ತಿಳಿದರೆ ನೀವು ಖುಷಿಪಡುತ್ತೀರಿ… ವಿಜಯ್ ಅವರ ಜೊತೆಗೆ ಕೆಲಸ ಮಾಡುವುದು ಅದ್ಭುತವಾಗಿತ್ತು. ಅವರು ತುಂಬಾ ಕರುಣಾಮಯಿ ಮತ್ತು ನಾನು ಸೆಟ್ ನೋಡಿರುವ ಅತ್ಯಂತ ಶ್ರಮಶೀಲ ನಟರಲ್ಲಿ ಒಬ್ಬರು.. ಅವರು ಸೆಟ್‌ಗೆ ಬೇಗ ಬರುತ್ತಾರೆ ಮತ್ತು ಪ್ಯಾಕ್ ಅಪ್ ಆಗುವವರೆಗೂ ಅಲ್ಲೇ ಇರುತ್ತಾರೆ. ಅವರು ಶೂಟ್ ಮುಗಿಯೋವರೆಗೂ ವ್ಯಾನಿಟಿ ವ್ಯಾನ್‌ಗೆ ಹೋಗುವುದಿಲ್ಲ ಎಂದಿದ್ಧಾರೆ.
ಇದೇ ವೇಳೆ “ ದಕ್ಷಿಣವು ನನ್ನನ್ನು ಒಪ್ಪಿಕೊಂಡಿದೆ ಮತ್ತು ಪ್ರೀತಿಸಿದೆ ಮತ್ತು ಪ್ರಭಾವ ಬೀರದ ಹಿಂದಿ ಯೋಜನೆಗಳಿಗೆ ನೋ ಎಂದು ಹೇಳಲು ನನಗೆ ಶಕ್ತಿ ನೀಡಿದೆ.
ವೈಕುಂಠಪುರಮುಲೂ ಮತ್ತು ಬುಟ್ಟ ಬೊಮ್ಮ ನನಗೆ ತುಂಬಾ ಪ್ರೀತಿಯನ್ನು ತಂದುಕೊಟ್ಟಿದೆ” ಎಂದಿದ್ಧಾರೆ.