ಕನ್ನಡತಿಯರ ನಡುವೆ ಕಾಂಪಿಟೇಷನ್ : ಪೂಜಾ ಹೆಗ್ಡೆ – ರಶ್ಮಿಕಾ…!! ಯಾರು ಬೆಸ್ಟ್..??
ಪೂಜಾ ಹೆಗ್ಡೆ ಟಾಲಿವುಡ್‌ನ ಅಗ್ರಮಾನ್ಯ ನಟಿ. ಸೂಪರ್ ಸ್ಟಾರ್ ಆಗಿ ಕ್ರೇಜ್ ಗಳಿಸಿರುವ ಪೂಜಾ ಹೆಗ್ಡೆ ತೆಲುಗಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ. ಸಂಭಾವನೆಯ ವಿಷಯದಲ್ಲಿ ಬೇರೆ ಯಾವ ನಟಿಯೂ ಅವರ ಸನಿಹದಲ್ಲಿಲ್ಲ..
ಮತ್ತೊಂದೆಡೆ ಕನ್ನಡ ಸಿನಿಮಾ ಮೂಲಕ ಹಿಟ್ ಆಗಿ ಟಾಲಿವುಡ್ ಗೆ ತೆರಳಿ ಅಲ್ಲಿಯೂ ಮಿಂಚಿ ಬಾಲಿವುಡ್ ಗೆ ಎಂಟ್ರಿಕೊಟ್ಟ ರಶ್ಮಿಕಾ ಈಗ ಕಾಲಿವುಡ್ ನಲ್ಲಿ ವಿಜಯ್ ಜಜೊತೆಗೆ ಬಣ್ಣ ಹಚ್ಚಲಿದ್ದಾರೆ…
ರಶ್ಮಿಕಾ ಮಂದಣ್ಣ ಇದ್ದಕ್ಕಿದ್ದಂತೆ ದೊಡ್ಡ ಚಿತ್ರ ನಿರ್ಮಾಪಕರಿಗೆ ಹಾಟ್ ಫೇವರೇಟ್ ಆಗಿದ್ದಾರೆ. ‘ಪುಷ್ಪಾ’ ನಟಿ ಇತ್ತೀಚೆಗೆ ವಂಶಿ ಪೈಡಿಪಲ್ಲಿ ನಿರ್ದೇಶನದ ದಳಪತಿ ವಿಜಯ್ ಅವರ ತಮಿಳು-ತೆಲುಗು ದ್ವಿಭಾಷಾ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಮತ್ತೊಂದ್ ಕಡೆ ಬಾಲಿವುಡ್ ನಲ್ಲಿ ರಣಬೀರ್ ಕಪೂರ್ ಅವರ ಅನಿಮಲ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದ್ರು.. ಈ ಎರಡು ಸಿನಿಮಾಗಳ ಜೊತೆಗೆ ರಶ್ಮಿಕಾ ಮಂದಣ್ಣ ಬಹುನಿರೀಕ್ಷೆಯ ‘ಪುಷ್ಪ 2’ ಸಿನಿಮಾದಲ್ಲಿ ಬ್ಯುಸಿಯಿದ್ಧಾರೆ…
ಇತ್ತ ಪೂಜಾ ಹೆಗ್ಡೆ ಅವರ ‘Beast’ ಸಿನಿಮಾ ಏಪ್ರಿಲ್ 13, ಚಿರಂಜೀವಿ , ರಾಮ್ ಚರಣ್ ಅವರ ಅಭಿನಯದ ಬಹುನಿರೀಕ್ಷೆಯ ಆಚಾರ್ಯ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ.. ಈ ಸಿನಿಮಾವೂ ಏಪ್ರಿಲ್ 13 ಕ್ಕೆ ರಿಲೀಸ್ ಆಗ್ತಿದೆ… ಅಲ್ಲದೇ ಅವರು ತ್ರಿವಿಕ್ರಮ್ ನಿರ್ದೇಶನದಲ್ಲಿ ಮಹೇಶ್ ಬಾಬು ಅವರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಹೀಗೆ ರಶ್ಮಿಕಾ ಪೂಜಾ ನಡುವೆ ದೊಡ್ಡ ಕಾಂಪಿಟೇಷನ್ ಇರೋವಾಗ್ಲೇ ರಶ್ಮಿಕಾ ಬಿಗ್ ಪ್ರಾಜೆಕ್ಟ್ ಗಳ ಅವಕಾಶವನ್ನ ಪೂಜಾ ಹೆಗ್ಡೆ ಅವರಿಂದ ಕಸಿದು ತಮ್ಮದಾಗಿಸಿಕೊಳ್ತಿದ್ಧಾರೆ… ಈ ಮೂಲಕ ಪೂಜಾ ಹೆಗ್ಡೆಯನ್ನ ಮೀರಿಸುವ ಪ್ಲಾನ್ ನಲ್ಲಿದ್ಧಾರೆ..